Submission 3376

ಒಮ್ಮೆ ನಕ್ಕು ಬಿಡಿ

ರಚನೆ : ಡಾ. ಬಿ. ಆರ್. ಕೃಷ್ಣಕುಮಾರ್

----------------------------------

ಮೈಯ ಬಣ್ಣವ ಹೀಯಾಳಿಸಿ ನಗುವವರನು ಕಂಡು ಕಾಣದಂತೆ ಒಮ್ಮೆ ನಕ್ಕು ಬಿಡಿ. ಜಾತಿ ಕಾರಣದಿಂದ ದೂರ ನಿಲ್ಲುವವರನು ಕೋಪದಿ ನೋಡದೆ ಒಮ್ಮೆ ನಕ್ಕು ಬಿಡಿ. ಹಣ, ರೂಪ, ಜ್ಞಾನದಿ ಮೆರೆದಾಡುವವರನು ಮಮಕಾರದಿ ಮನ್ನಿಸಿ ಒಮ್ಮೆ ನಕ್ಕು ಬಿಡಿ. ಅಹಂ-ಜಂಭದಿ ಆಡಿಕೊಳ್ಳುವವರನು ಕರುಣೆ ಕಣ್ಗಳಲಿ ಕಂಡು ಒಮ್ಮೆ ನಕ್ಕು ಬಿಡಿ. ಬಡತನ, ಹಸಿವು, ಅವಮಾನ ಸಂಚಾರಿಭಾವ ದೈರ್ಯದಿ ಎದುರಿಸಿ ಒಮ್ಮೆ ನಕ್ಕು ಬಿಡಿ. ಹುಟ್ಟು, ಸಾವೆಂಬುದು ಶಾಶ್ವತ ನಿಲ್ದಾಣಗಳು ಅಳುಕಿಲ್ಲದೆ ಅನುಭವಿಸಿ ಒಮ್ಮೆ ನಕ್ಕು ಬಿಡಿ. ನಕ್ಕಷ್ಟು ಹಗುರ, ಅತ್ತಷ್ಟು ಭಾರ ಸುಖವೋ: ದುಃಖವೋ ಒಮ್ಮೆ ನಕ್ಕು ಬಿಡಿ.

----------------------------------

ನೋಂದಣಿ ಐಡಿ : KPFS2-7298

202
Votes
1,153
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top