Submission 3372

ಪ್ರೇಮ ಕಾವ್ಯ

ರಚನೆ : ಮಂಜುನಾಥ ನಾಯಕ ಎನ್ ಆರ್

----------------------------------

ಪ್ರೇಮದ ಕಾವ್ಯಕ್ಕೆ ಪಲ್ಲವಿಯು ನೀನಾದೆ ಹಾಡುವ ರಾಗಕೆ ಇಂಪಾದ ದನಿಯಾದೆ ತನು ಮನ ಅರಳಿಸುವ ತಂಗಾಳಿ ನೀನಾದೆ ವೈದೇಹಿ ಬರೆವ ಸಾಹಿತ್ಯದ ಸುಧೆಯಾದೆ ಮೌನ ಮಾತುಗಳು ಮಧುರ ಮಿಲನವಾದೆ ಗುಂಡಿಗೆಯ ಗೂಡ ಸದ್ದಿಗೆ ಸದಾ ತಾಳವಾದೆ ಮಿಡಿತ ಬಡಿತಗಳೆರಡು ಹೆಚ್ಚಾಗಿ ಪೆಚ್ಚಾದೆ ಸಮಸ್ವರ ಸ್ತರದ ಜೀವದ ನಾಡಿ ನೀ ಮಿಡಿದೆ ಅನುರಾಗ ಬಂಧನ ಸ್ಪಂದನಾ ಋತುಗಾನವೇ ಕಾವ್ಯ ನೈದಿಲೆಯ ಸಿರಿ ಸಿಂಗಾರ ಸಂಭ್ರಮವೇ ಜ್ಞಾನ ಸರಸ್ವತಿಯ ಸಾಹಿತ್ಯ ಹೃದಯ ಸಿರಿಯೇ ಬದುಕು ಬವಣೆ ಜೀವನ ಸ್ಫೂರ್ತಿ ಚಿಲುಮೆಯೇ ಭಾವ ಜೀವದ ಹೃದಯದ ಸ್ಪಂದನಕೆ ಸ್ಫೂರ್ತಿ ಗೆಲುವು ಕ್ಷಣವು ಕಾರಣ ನಿನ್ನೊಲವಿನ ಕೀರ್ತಿ ಪ್ರೇಮ ಕಾವ್ಯವಿದು ಜೀವನ ಮುನ್ನುಡಿ ರೀತಿ

----------------------------------

ನೋಂದಣಿ ಐಡಿ : KPFS2-7296

87
Votes
827
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top