Submission 3264

ನನ್ನಪ್ಪ

ರಚನೆ : ರಕ್ಷಿತಃ ಹೆಚ್.ಎಂ.

----------------------------------

ನನ್ನ ಜೀವನ ಪ್ರಾಣ ನನ್ನಪ್ಪನೆ ನಿನ್ನ ನಗುವಿನಲ್ಲಿದೆ ನನ್ನ ಜಗವೆಲ್ಲವೂ ಬೆಳಕಿನ ಬೆಳಕಾದೆ ನೀನು ನನ್ನ ಬದುಕಿನಲ್ಲಿ ಪ್ರತಿ ಹೆಜ್ಜೆಗೂ ನೆರಳಾಗಿ ನಿಂತೆಯ ಮನದಾಳದಲ್ಲಿ ನಿನ್ನ ಮಾತು ಕೇಳಿದರೆ ಶಾಂತಿ ತುಂಬುತ್ತದೆ ನಿನ್ನ ಪ್ರೀತಿಯ ಕಣ್ಣಲ್ಲಿ ಭದ್ರತೆ ಕಾಣುತ್ತದೆ ಹೊಸ ಕನಸು ಬೀಜ ಬಿತ್ತಿದ ಗುರು ನೀನು ಬಿದ್ದರೆ ಎಬ್ಬಿಸುವ ಶಕ್ತಿ ಕೊಟ್ಟ ದೇವರ ರೂಪ ನೀನೆ ನಿನ್ನ ಬೆವರಿನ ಕಣಗಳು ನನ್ನ ಸೌಭಾಗ್ಯ ನಿನ್ನ ಹಾದಿಯೇ ನನ್ನ ಸತ್ಯ ಮಾರ್ಗ ಕೋಪದ ಅಡಿಯಲ್ಲಿ ಮಮತೆ ಮುಸುತಿದೆ ಆ ಕೋಪದಲ್ಲಿ ಪ್ರೀತಿ ಕಂಗೊಳಿಸಿದೆ ನಿನ್ನ ಕೈ ಹಿಡಿದರೆ ಭಯ ಎಲ್ಲ ಹೋದಂತೆ ನಿನ್ನ ಒಂದು ಮಾತು ಸಾಕು ಮನಸು ಶಾಂತವಾದಂತೆ ಹೆಚ್ಚು ಹೇಳದೆ ಎಲ್ಲವನ್ನು ತೋರಿಸುವ ನೀನು ಮನದೊಳಗೆ ಮಾತುಗಳ ಭರಿತ ಸಾಗರ ನೀನು

----------------------------------

ನೋಂದಣಿ ಐಡಿ : KPFS2-7211

0
Votes
111
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top