ಸಮಯ ನೀ ಸ್ವಲ್ಪ ನಿಲಬಾರದೇ
ರಚನೆ : ವರ್ಷಾ
----------------------------------
ಕಡು ಬಿಸಿಲ ತಾಪವು ತಂಪನ್ನು ಎರೆದಾಗ ಬಿರುಸಾದ ಗಾಳಿಯು ಸಿಹಿ ಸ್ಪರ್ಶ ಕೊಡುವಾಗ ಅಲೆಗಳ ಸಂಗೀತ ತನು ಮನವ ಬೆರೆತಾಗ ಮನ ಹೇಳಿತು ನಿನ್ನ ಹಾಜರಿಯ ಸೊಬಗೆಂದು ಕ್ಷಣ ನಿಂತಿತು ಅಲ್ಲೇ ನೀ ನನ್ನ ಸವಿಯೆಂದು ನೀ ನನ್ನ ಕೈ ಹಿಡಿದು ಭರವಸೆಯ ಚಿಗುರೊಡೆದು ಜೊತೆಯಲ್ಲಿ ನಡೆವಾಗ ಬಲು ಸೊಗಸು ಜಗವೀಗ ನಿನ್ನ ಕಿರು ನಗೆಯು ಮೋಡಿ ಮಾಡಿರುವಾಗ ಅನಿಸುತಿದೆ ಯಾಕೋ ಕಳೆದು ಹೋಗುವೆನೆಂದು ಕಣ್ಣಲ್ಲಿ ಕಣ್ಣಿಟ್ಟು ಕರಗಿ ಹೋಗುವೆನೆಂದು ಈ ಸ್ತಬ್ಧ ಮೌನದಲಿ ಕೆಲ ಸಮಯವು ನಿನ್ನ ತೋಳಲ್ಲಿ ಕನಸು ಕಂಡಿರುವೆ ಜನುಮಗಳು ನಿನ್ನ ಜೊತೆಯಲ್ಲಿ ಬಡಪಾಯಿ ಈ ಮನವು ಬೇಡುತಿದೆ ಸಮಯವನು ನೀ ಇಲ್ಲೇ ನಿಲ್ಲೆಂದು ಬಲು ಕ್ರೂರಿ ಸಮಯವದು ಹೇಳುತಿದೆ ತನ್ನ ಮನಸು ಕಲ್ಲೆಂದು
----------------------------------
ನೋಂದಣಿ ಐಡಿ : KPFS2-7181