Submission 3190

ಅವಳೊಂದು ಚೆಂದದ ಛಂದಸ್ಸು

ರಚನೆ : ನಿರ್ಮಾಣ

----------------------------------

ಅವಳೊಂದು ಚೆಂದದ ಛಂದಸ್ಸು, 'ಲಘು'ವಾಗಿ ಎದೆಗಿಳಿದು, 'ಗುರು'ವಾದಳು ಪ್ರೀತಿಗೆ...! ಭಾವಗಳ ಗಣ ವಿಂಗಡಿಸಿ, ಲಯ ನೀಡಿದಳು ಒಲವಿಂಗೆ... ಕಣ್ಣೋಟದ 'ಶರ' ದಲ್ಲೇ ಕನಸ 'ಕುಸುಮ' ಬಿಡಿಸಿದಳು, ಜೊತೆ ನಡೆಯೋ 'ಭೋಗ' ಬಯಸಿ, ಎನ್ನ ಬಾಳ 'ಭಾಮಿನಿ'ಯಾದಳು...! ಎದೆಯ ಮಾರ್ದನಿಗೆ 'ವಾರ್ದಕ'ವಾಗಿ, ಕಪ್ಪು ಬಿಳುಪು ಕಲ್ಪನೆಗೆ ಬಣ್ಣದ 'ಪರಿವರ್ದಿನಿ'ಯಾದಳು.‌ ಅಂದದಲಿ ಕಂದ ಪದ್ಯ ಅವಳು ಪ್ರೀತಿಗೀತಿಗೆ ತ್ರಿಪದಿ ಸಾಲವಳು.. ಒಟ್ಟಾರೆ ಅವಳು ಷಟ್ಪದಿಯ "ಕವಿತೆ"ಯಂತವಳು...‌

----------------------------------

ನೋಂದಣಿ ಐಡಿ : KPFS2-7158

0
Votes
140
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top