ಆಂತರ್ಯದ ಮಾರ್ಧನಿ
ರಚನೆ : ಶ್ರೀನಿವಾಸ್ ಎಚ್‌ಬಿ
----------------------------------
ಕಾರ್ಮೋಡದಂಚಲ್ಲಿ, ತಾರೆಗಳ ಗುಂಪಲ್ಲಿ ಕಂಗೊಳಿಸೊ ಚಂದಿರನ ಪ್ರತಿಬಿಂಬ ಕಂಡಂತೆ! ನನ ನಲ್ಲೆ ಮೊಗದಲ್ಲಿ, ರೆಪ್ಪೆಗಳ ನಡುವಲ್ಲಿ ವಿಜೃಂಭಿಸೋ ನೇಸರನ ಹೊಂಗಿರಣ ನಾ ಕಂಡೆ! ಅದ ಕಂಡ ಕ್ಷಣದಿಂದ, ಆ ಕಣ್ಣ ಹೊಳಪಿಂದ ಸೋತಿರುವೆ ಸಂಪೂರ್ಣ ಪರಿಪೂರ್ಣ ತನುವಿಂದ! ನಿನ ಕಣ್ಣ ಕಾಡಿಗೆಯು, ನನ ಸೋಕುವ ಮೊದಲು ಹೋಗಿಬಿಡು ನನ್ನೊಲವೆ ಈ ಹುಚ್ಚು ಕನಸಿಂದ... ಈ ಹುಚ್ಚು ಕನಸಿಂದ...
----------------------------------
ನೋಂದಣಿ ಐಡಿ : KPFS2-7150