ಕೆಲವು ಮನಸುಗಳೇ ಹಾಗೆ...
ರಚನೆ : ನಿರುಪದಿ ಭಜಂತ್ರಿ
----------------------------------
ಕೆಲವು ಮನಸುಗಳೇ ಹಾಗೆ, ಜೀವನಕ್ಕೆ ಸಾಕಾಗುವಷ್ಟು ನೆನಪುಗಳನ್ನ ನೀಡಿ ಹಾಗೆ ಮೆಲ್ಲನೆ ಮರೆಯಾಗಿಬಿಡ್ತವೆ... ಕಣ್ಣಿಗೆ ಕಾಣದಷ್ಟು,ಕೈಗೆ ಸಿಗಲಾರದಷ್ಟು ದೂರ ಹೋದರು ಸೀಮೆಯೇ ಇಲ್ಲದಂತ ನೆನಪುಗಳ ಸಾಗರಕೆ ಸಾಕ್ಷಿಯಾಗಿಬಿಡ್ತವೆ... ಕೆಲವು ಮನಸುಗಳೇ ಹಾಗೆ ಸಿಗಲಾರದ ಮನಸುಗಳನ್ನೇ ಅತಿಯಾಗಿ ಇಷ್ಟಪಡುತಾ ನನಸಾಗದ ಕನಸುಗಳ ಕಾಣುತಾ ಕೊನೆಗೆ ಆ ನೆನಪುಗಳಲ್ಲೇ ಜೀವಿಸಿಬಿಡ್ತವೆ ಮರೆಯದ ಹಾಡುಗಳ ಹಾಡುತಾ ಮುಗಿಯದು ಕವಿತೆಗಳ ಬರೆಯುತಾ ಸಿಗದವರ ಹಿತವ ಬಯಸುತಾ ಅಮರ ಪ್ರೇಮಿಗಳಾಗಿ ಉಳಿದುಬಿಡ್ತವೆ...
----------------------------------
ನೋಂದಣಿ ಐಡಿ : KPFS2-7097