Submission 3082

ಕೋಗಿಲೆಗೊಂದು ಪತ್ರ

ರಚನೆ : ರೇಣುಕೇಶ್ ಜಿ, ಆರ್

----------------------------------

ಮಳೆಹನಿಗಳಲ್ಲಿ ಮಿಂದು ಹಸಿರೆಲೆಗಳಡಿ ಕೂಗುತ ಕುಳಿತ ಓ ಕೋಗಿಲೆ ನಾ ಬರಲೆ ನಿನ್ನೊಡನೆ! ಇಬ್ಬರು ಸೇರಿ ಕೂಗೋಣ ಧಣಿದ ಧರೆಗೆ ಆ ಮಳೆಯನ್ನು ಕರೆಯೋಣ ಒಣ ಧಗೆಯ ಆರ್ಭಟದಲ್ಲಿ ಚಿಗುರು, ಹೂವನ್ನು ಬೆಳೆಸೋಣ. ಜೀವಸಂಕುಲದೇಳಿಗೆ ಬಯಸಿ, ಬಿರುಕಿನ ಬದುಕನ್ನು ಅಳಿಸೋಣ, ಬಾಂಧವ್ಯದ ಬಾಳನ್ನು ಹರಸಿ, ಪ್ರಾಣ ಉಳಿಸುವ ಶುದ್ಧಗಾಳಿಯೆಲ್ಲಡೆ ಪಸರಿಸಿ,ನಾಡಿನೇಕತೆ ಸಾರೋಣ ಬಾ ಕೋಗಿಲೆ ಸೇರೋಣ ಕೂ, ಕೂ, ಕೂ, ಎನ್ನುತ ಕೂಗಿ ಸರ್ವರಲ್ಲೂ ಮೀಯೋಣ.

----------------------------------

ನೋಂದಣಿ ಐಡಿ : KPFS2-7070

105
Votes
688
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top