ಕಲ್ಯಾಣವಾಗದ ಕರ್ನಾಟಕ ನನ್ನದು
ರಚನೆ : ದೇವರಾಜ
----------------------------------
ಕಲ್ಯಾಣವಾಗದ ಕರ್ನಾಟಕ ನನ್ನದು ಅಭಿವೃದ್ಧಿಯೇ ಕಾಣದ ಬಯಲುಸೀಮೆ, ಇದು ಅಜ್ಞಾನದ ಮಹಿಮೆ. ಗುಲಾಮಗಿರಿಯೇ ತಲೆಗೊತಕೊಂಡು, ಭ್ರಷ್ಟಾಚಾರವ ಮೈಗೋತ್ತಿಕೊಂಡು ಮೆರದಾಡುವ ರಾಜಕಾರಣಿ, ಅವರ ಹಾದಿಯಲ್ಲಿ ನಡೆಯುವ ಅಧಿಕಾರಿ, ಏನು ಅರಿಯದ ಜನ ಆಗುವರು ಬಿಕಾರಿ. ಕಲ್ಯಾಣವಾಗದ ಕರ್ನಾಟಕ ನನ್ನದು. ಭೀಮಾ ಕೃಷ್ಣೆ ಭದ್ರಾ ಸಾಗಿದ ನಾಡಿದು, ಆದ್ರೂ ಬೆಳೆ ಬೆಳೆಯಾಲಾಗದ ಗೊಳದು. ಹೆಸರಂತೆ ಕಲ್ಯಾಣ ಕರ್ನಾಟಕ, ಮಾಡುವರಲ್ಲಾ ಅಭಿವೃದ್ಧಿಯ ನಾಟಕ. ನನ್ನವರ ನೋವು ಸರ್ಕಾರದ ಕಣ್ಣಿಗೆ ಗುಳೆ ಹೊರಟಿರುವರಲಾ ಕಾಣದ ಊರಿಗೆ. ಮರಳಿ ಬರುವರಾ ಹುಟ್ಟಿದ ಊರಿಗೆ?
----------------------------------
ನೋಂದಣಿ ಐಡಿ : KPFS2-7042