ನಾನು ನನ್ನ ಗುರುತು
ರಚನೆ : ಸುಮಂತ್ ಗೌಡ . ಎಂ
----------------------------------
ಇಂದು ಹುಟ್ಟಿರುವ ನನಗೆ, ಬೇರಾರ ಅವಲಂಬಿಕೆಯಿಲ್ಲ. ಎಲ್ಲರೂ ಅವರವರ ಮಟ್ಟಿಗೆ ಶ್ರೇಷ್ಠರೇ, ಎಲ್ಲರೂ ಅವರವರ ಪರಿಸ್ಥಿತಿಗೆ ವಿಕಲರೆ. ನನಗ್ಯಾವುದೇ ಆಸರೆಯ ಅವಲಂಬನೆಯಿಲ್ಲ. ಇಂದು ಹುಟ್ಟಿರುವ ನನಗೆ, ಯಾರದೋ ಹೊಲಿಕೆಯಿಲ್ಲ. ಎಲ್ಲರೂ ಅವರವರ ನೆರಳಿಗೆ ದೊರೆಗಳೆ, ಅವರಿವರ ಪಾಲಿಗೆ ಉತ್ತಮ್ಮರು, ಅಲ್ಪರೇ. ನಾನಾಗಿಯೇ ನಾನು ಹುಟ್ಟಿರುವೆ, ನನ್ನ ತನದವನಾಗಿಯೆ ಮತ್ತೆ ಮರಳುವೆ. ನನಗೆ ಬೇರಾರದೋ ಗುರುತಿಲ್ಲ, ಮತ್ತೊಬ್ಬರೊಡನೆ ಸ್ಪರ್ಧೆಯಿಲ್ಲ. ಅವರವರ ಜ್ಞಾನ, ಆಲೋಚನೆ ಆಗೂ ಮನಸ್ಥಿತಿ ಅವರದು. ಅವರಿವರ ಕಥೆವೆತೆಗಳು ಬೇಕಿಲ್ಲ. ನನ್ನ ಸಾಧನೆಯ ಗುರಿ ನನ್ನದು, ನಾ ಇನ್ಯಾರನ್ನೋ ಹೋಲಬರದು.
----------------------------------
ನೋಂದಣಿ ಐಡಿ : KPFS2-7011