ಕನ್ನಡ
ರಚನೆ : ಗೀತಾಂಜಲಿ ಜಡ್ಡಿಪಾಲ್
----------------------------------
ಕನ್ನಡ ಭಾಷೆಯ ಸಂಭ್ರಮಿಸಲು ಬರಿಯ ಒಂದು ದಿನ ಸಲ್ಲ, ಇದು ಮನಸ್ಸಿಗೆ ಮುದವನ್ನ ನೀಡುವ ಸಿಹಿಯಾದ ಬೆಲ್ಲ. ವಿಜಯನಗರ, ಕದಂಬ, ಹೊಯಸಳರೇ ನೆಲೆಸಿಹರು ನಿನ್ನಲ್ಲಿ, ಇಂದು ನಾವು ಹುಡುಕುವರು ನಿನ್ನ, ನವೆಂಬರ್ ಒಂದರಲ್ಲಿ. ಕುವೆಂಪು, ಬೇಂದ್ರೆ, ಕಾರಂತರು ಪಸರಿಸಿದರು ನಿನ್ನ ಕಂಪನ್ನ, ಪರಭಾಷಿಕರಿಗೆ ಈ ನೆಲ ಯೆಂದಿಗೂ ನೀಡಿದೆ ತಂಪನ್ನ. ನಮ್ಮ ಬಾಯಾರಿಕೆಯ ನೀಗಿಸಿದೆ ಕೃಷ್ಣೆ, ಕಾವೇರಿಯ ರೂಪದಲ್ಲಿ, ದಣಿವಾದಾಗ ನೆರಳನ್ನು ಒದಗಿಸಿದೆ ಸಹ್ಯಾದ್ರಿಯ ಕೂಪದಲ್ಲಿ. ಓ ಭುವನೇಶ್ವರಿ, ಎಂದಿಗೂ ತರಲಾರೆವು ನಿನಗೆ ಧಕ್ಕೆ, ಈ ಗಂಡಭೇರುಂಡ ಹಾರಲಿ ಎತ್ತರ, ಬಿಚ್ಚಿ ತನ್ನ ರೆಕ್ಕೆ.
----------------------------------
ನೋಂದಣಿ ಐಡಿ : KPFS2-6998