ಕನ್ನಡ ನಿತ್ಯೋತ್ಸವ
ರಚನೆ : ರಾಮನಗೌಡ ಚಂದ್ರಗೌಡ ಪಾಟೀಲ
----------------------------------
ಏನೆಂದು ವರ್ಣಿಸಲಿ ಸಹ್ಯಾದ್ರಿ ತಪ್ಪಲಿನಲಿ ಪದಗಳೇ ಸಾಲದೇ ಸೋತಿರುವೆ ಕರಾವಳಿ ತೀರದಲಿ ಕಲ್ಲೊಂದು ಕೇಳಿತು ಹಂಪಿ ವೈಭೋಗದ ನಾದವೆಲ್ಲಿ ನದಿಯೊಂದು ನುಡಿಯಿತು ತುಂಗೆಯ ಗರ್ಭದಲಿ ಕೃಷ್ಣದೇವನ ಆಡಂಭರ, ಮಯೂರನ ವೀರ ನಾಟ್ಯದಲ್ಲಿ ಮತ್ತೆ ರಾರಾಜಿಸಬೇಕೆನ್ನುವ ಆಸೆ ಕನ್ನಡ ಮನದಲ್ಲಿ ಕನ್ನಡಕ್ಕೆ ಕನ್ನಡಿ ಕನ್ನಡಿಗರಾಬೇಕೆನ್ನುವ ಹಂಬಲದಲ್ಲಿ ಪ್ರತಿ ದಿನ ಕನ್ನಡದ ನಿತ್ಯೋತ್ಸವವ ಸಂಭ್ರಮದಲ್ಲಿ ವಿಜೃಂಬಿಸು ಕನ್ನಡ ರಾಜ್ಯೋತ್ಸವ ತನುಮನದಲ್ಲಿ.
----------------------------------
ನೋಂದಣಿ ಐಡಿ : KPFS2-6994