ಅರಿಯಬಲ್ಲಳೇ ಎನ್ನ ಸೀತೆ?
ರಚನೆ : ಸುಚೇಂದ್ರ ಅಡಿಗ
----------------------------------
ಅರುಹದೆ ಒಪ್ಪಿದೆ ವನವಾಸಕೆ, ಒಬ್ಬನೇ ನಡೆಯುವ ಯೋಚನೆಗೆ, ಪಿತೃಧರ್ಮ ಪರಿ ಪಾಲನೆಗೆ, ಅರಿಯಬಲ್ಲಳೇ ಎನ್ನ ಸೀತೆ..? ಸ್ವಾಮಿಯೆಲ್ಲೋ ನಾನಲ್ಲಿ ಅಂದಳಾಕೆ, ಅರಮನೆ ಆಡಂಬರ ನನಗೇಕೆ, ಅವಕಾಶ ಕೊಡದೆ ಮತ್ತೆ ಯೋಚನೆಗೆ, ಅರಿತೇ ನಡೆದಳೇ ನನ್ನ ಜೊತೆ..? ಜಗದ ಚುಚ್ಚು ಮಾತಿಗೆ, ಅನುಮಾನದ ಸುತ್ತು ಕೋಟೆಗೆ, ನಾನೇ ಇತ್ತ ಅಗ್ನಿ ಪರೀಕ್ಷೆಗೆ, ಅರಿಯಬಲ್ಲಳೇ ಎನ್ನ ಸೀತೆ..? ಜಾನಕಿ ಹೊರತಲ್ಲ ಈ ವಿಧಿಗೆ, ಹೊಸತೇನಲ್ಲ ಧರ್ಮ ಸಂಕಟಕೆ, ಗೆದ್ದು ಬರುವ ಆ ಮಾತಿಗೆ, ಅರಿತೇ ನಡೆದಳೇ ನನ್ನ ಜೊತೆ..?
----------------------------------
ನೋಂದಣಿ ಐಡಿ : KPFS2-6962