ಪ್ರೀತಿ
ರಚನೆ : ಕಾವೇರಿ ನಿಂಗಪ್ಪ ಜಾವೂರ್
----------------------------------
ಸಿಕ್ಕರು ಸಿಗದಂತಾದ ಕೃಷ್ಣ ನೀನು ಸಿಗದ ಕೃಷ್ಣನನಿಗಾಗಿ ಕಾದ ರಾಧೆ ನಾನು ನೀನು ಕೃಷ್ಣನಾದರೆನಂತೆ, ನಿನ್ನ ಜೊತೆ ಬಾಳುವ ಅದೃಷ್ಟವಿಲ್ಲದಳು ನಾನಾದರೆನಂತೆ ನಿನ್ನ ಜೊತೆ ನಾ ಹಾಕಿದ ಹೆಜ್ಜೆಯೇ ನನಗೆ ಸಪ್ತಪದಿ ನೀ ಮುಟ್ಟಿದ್ದ ಸ್ಪರ್ಶವೇ ನನ್ನ ಮೊದಲ ರೋಮಾಂಚನ ನಿನ್ನ ಜೊತೆ ಕಳೆದ ಕೆಲವು ದಿನಗಳೆ. ನಾ ನಿನ್ನ ಜೊತೆ ಮಾಡಿದ ಜೀವನ ನೀ ನನಗೆ ಮೂರು ಗಂಟು ಹಾಕದಿದ್ದರೆನಂತೆ. ತಾಳಿಯ ಸಂಬಂಧ ಇಲ್ಲದೆ ನನ್ನ ಎದೆಯಲ್ಲಿ ಬಿಡಿಸಲಾಗದ ಗಂಟು ಹಾಕಿದವನು ನೀನು ಎಷ್ಟೇ ಪ್ರೀತಿಸಿದರು ಈ ಜನ್ಮದಲ್ಲಿ ಸಿಗಲಾರದವನು ನೀನು.. ಮುಂದಿನ ಜನ್ಮದಲ್ಲಿ ಸಿಗುವೆ ಎಂಬ ಖಾತರಿಯಿಂದ ದಿನವೂ ದೇವರಲ್ಲಿ ಪ್ರಾರ್ಥಿಸುವವಳು ನಾನು ಸಿಗ್ತಿಯಾ?
----------------------------------
ನೋಂದಣಿ ಐಡಿ : KPFS2-6943