ಕನ್ನಡ ಸಿರಿಯಾನ
ರಚನೆ : ಕ. ಲ. ರಘು
----------------------------------
ಮನುಜ ಮತ ವಿಶ್ವ ಪಥ ಮನುಕುಲದ ಒಳಿತಿಗಾಗಿ ಮಂತ್ರ ಮಾಂಗಲ್ಯ ಎಲ್ಲಾದರೂ ಇರು ಎಂತಾದರೂ ಇರು ಮಲೆನಾಡ ರಸಋಷಿ ಹರಿಸಿದರು ಕನ್ನಡದ ಪ್ರೇಮಧಾರುಣ್ಯ... ಕ್ಷಣಹೊತ್ತು ಆಣಿ ಮುತ್ತು ಕನ್ನಡದ ಪ್ರತಿ ಪದವೂ ನುಡಿಮುತ್ತು ಸವಿಜೇನು ನಾಡುನುಡಿ ಮೆಚ್ಚಲೇಬೇಕು ನಾಡೋಜರ ನಾಣ್ಣುಡಿ ಮುದ್ದು ದುಂಬಿಗೆ ಮಧುವಂತೆ ಕನ್ನಡ ಮೈಮನದ ಸುಳಿಯಲ್ಲಿ ಮನೋಹಾಸಿನಿ ಕನ್ನಡ ಸದಾ ಉರಿಯುತಿರಲಿ ನಾಡದೇವತೆಯ ಹಣತೆ ಸದಾ ನುಡಿಯುತಿರಲಿ ಕನ್ನಡವ ನಮ್ಮ ನಾಡ ಜನತೆ ಬೆಳಗಲಿ ಮೊಳಗಲಿ ಕನ್ನಡ ಸಾಹಿತ್ಯದ ಆಂತರಿಕ್ಷ ಯಾನ ಸಕಲವೂ ಸಕಾಲವಾಗಲಿ ಕನ್ನಡ ಸಿರಿಯಾನ.
----------------------------------
ನೋಂದಣಿ ಐಡಿ : KPFS2-6887