ಒಡಲ ಪ್ರೀತಿ
ರಚನೆ : ವಡ್ಡರ್ಸೆ ಪ್ರಕಾಶ್ ಆಚಾರ್ಯ
----------------------------------
ಮುಸ್ಸಂಜೆಯ ತಂಗಾಳಿ ಎದುರಿಗೆ ನೀಬಂದಾಗ ಕೆಂದುಟಿಯ ಒಳಗಿಂದ ಸದ್ದಿಲ್ಲದೆ ಬಂದ ನಗು ಎದೆ ಬಡಿತ ಜೋರಾಗಿ ಗರಿಗೆದರಿದ ಹಕ್ಕಿ ನಿಂತಾಗಿ ರವಿಯ ಕೆನ್ನೆಯು ಕೆಂಪಾಗಿ ನಾಚಿ ಮರುಳಾದೆ ಮುಗಿಲನು ಸರಿಸಿ ಸಾಗುವ ಹಕ್ಕಿಯ ದಂಡು ನನ್ನ ನೋಡಿ ಹರೆಯದೊಳಗಿನ ಗುಟ್ಟನು ತಿಳಿಹೇಳಿ ಕಾಲದ ಕೈಗೆ ಸಿಕ್ಕಿ ನಗುವಿನ ಸವಿ ಮರೆಯದಿರು ನೀ ಇಡುವ ಹೆಜ್ಜೆ ಕನಸಿಗದು ಬಣ್ಣದ ಗೆಜ್ಜೆ ಎಂದಿತು ಬಾನ ಅಂಚಲಿ ಜಾರುವ ರವಿಯು ನಮ್ಮ ನೋಡಿ ಕಡಲ ನೀರೊಳಗೆ ನಲಿವ ಮೀನುಗಳು ದಡಕೆ ಬಂದು ಹಗಲಗನಸಿನೊಳಗೆ ಜಾರುವ ಮುನ್ನ ಗುಟ್ಟು ಹೇಳುವೆನೆಂದು ದಡದ ಸನಿಹಕೆ ಬಂದು ತುಸು ನಾಚಿ ಒಳ ಸೇರಿತು
----------------------------------
ನೋಂದಣಿ ಐಡಿ : KPFS2-6872