Submission 2780

ನನಗಾಗಿ ಕಾದಿರುವೆ

ರಚನೆ : ಎಚ್ ಬಿ ಕಲ್ಲೇಶ್

----------------------------------

ಅವರಿವರಿಗೊಸ್ಕರ ಬದಲಾದ ನಾನು ಮತ್ತೊಮ್ಮೆ ನನಗೇನೆ ದೊರಯದೇ ಉಳಿದೆನು ಅಸ್ತಿತ್ವವವಳಿಸುವ ಮುನ್ನ ಹುಡುಕುತಲಿ ನಡೆದಿರುವೆ ಮಂದಿಯೊಳು ಕಳೆದಿರುವ ನನಗಾಗಿ ಕಾದಿರುವೆ... ಅವರ ಕಿರುದುಟಿಯ ನಗುವಲುಡುಕಿದೆ ನನ್ನ ಅವರ ಬೆಳವಣಿಗೆಯೊಳಗು ಹುಡುಕಿದೆ ನನ್ನ ನನದೇನು ಸುಳಿವಿಲ್ಲ, ಅವರ ಬದುಕಿನ ಒಳಗೆ ಹುಡುಕುತಲೆ ಕುಳಿತಿರುವೆ ಪರರಿಗೋಸ್ಕರ ಮಿಡಿದ ನನಗಾಗಿ ಕಾದಿರುವೆ ಸರಿದ ಸಮಯದ ಒಳಗೆ ನನದೇನು ಉಳಿದಿಲ್ಲ ಮುನ್ನಡೆದ ಅವರೆದೆಯ ಕಿರುಮೂಲೆ ನನಗಿಲ್ಲ ನಾನಿನ್ನು ಅಲ್ಲಿಲ್ಲ ನನ್ನ ನಾ ಹುಡುಕುತಲಿರುವೆ ನನ್ನನ್ನೆ ಮರೆತ ನನಗಾಗಿ ಕಾದಿರುವೆ

----------------------------------

ನೋಂದಣಿ ಐಡಿ : KPFS2-6857

10
Votes
143
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top