ಮೂಕ ಭಾವ
ರಚನೆ : ವಿಜಯ್ ಕುಮಾರ್ ಜಿ ಬಿ
----------------------------------
ಮೂಕ ಹಕ್ಕಿಯಾಗುವಾಸೆ ನಿನ್ನ ಧನಿಯ ಕೇಳುವಾಗ ರೆಕ್ಕೆ ಕಟ್ಟಿ ಹಾರುವಾಸೆ ನೀನು ಸನಿಹ ಸುಳಿಯುವಾಗ ಮನಸು ಮುನಿಸ ತೊರೆದಿದೇ ಹಠವ ಕಿತ್ತು ಒಗೆದಿದೆ ಅದೇನೊ ಅರಿಯದ ಭಾವನೆ ನನಗೆ ತಿಳಿಯದೇ ಮೂಡಿದೆ ಯಾರ ನೆನಪು ಬಾರದೇಕೆ ಕಣ್ಣ ಮುಂದೆ ನೀನಿರೆ ನನ್ನೇ ನಾನು ಮರೆವೆನೇಕೆ ನಿನ್ನ ಸನಿಹ ನೀನಿರೆ
----------------------------------
ನೋಂದಣಿ ಐಡಿ : KPFS2-6855