Submission 2766

ಕಟ್ಟುವಾಲೆ

ರಚನೆ : ಪರಿಮಳ ರಾವ್ ಕೆ

----------------------------------

ಕೆಲಸವಿಲ್ಲದೆ ಕುಳಿತ ಅವನ ಮನೆ ಬೀರು ದಿನ ದಿನವು ಯಾರಿಗೋ ಕಾಯುತಿತ್ತು ತನ್ನ ಸೌಂದರ್ಯ ಸವಿಯಲೊಲ್ಲದ ಮದನ ಮುಂದಿದ್ದರೇನು ಫಲ ಎನ್ನುತಿತ್ತು ಕಳೆದ ಕಾಲದ ಮುಂದೆ ಬಂದಳೊಬ್ಬಳು ಸವತಿ ಹುಡುಗನಾಟಕೆ ಒಂದು ಸೂತ್ರವಾಗಿ ಬಂದಂದೆ ತನ್ನ ಸಿರಿ ತುಂಬಿದಳು ಬೀರುವಲಿ ಮತ್ತೆ ಪತಿಗೆ ಸಿಗದ ಪಾತ್ರವಾಗಿ ಅಲೆಮಾರಿಯನು ಮರೆತು ಅಲಮಾರ ಬಿಗುವಾಯ್ತು ತನಗೊಂದು ಗೌರವವ ಪಡೆಯಿತೆಂದು ದಿನಕಳೆದ ಮೇಲಷ್ಟೇ ಸತ್ಯ ದರ್ಶನವಾಯ್ತು ಹೆಣ್ಣೊಡಲ ಗುಟ್ಟು ಕತ್ತು ಹಿಸುಕಿತೆಂದು ಅವನಾಗಲೋ ಖಾಲಿ ಬೀರುವಿಗೂ ಲಾಲಿ ಸಂತೆಯಂದದ ಬೇಕು ಬೇಡಗಳೇ ಈಗಿಲ್ಲಿ

----------------------------------

ನೋಂದಣಿ ಐಡಿ : KPFS2-6849

4
Votes
118
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top