Submission 2748

ನನ್ನಮ್ಮ

ರಚನೆ : ಸಿಂಚನ.ಎನ್

----------------------------------

ಒಡಲಿನಾಳದಲ್ಲಿ ನವಮಾಸಗಳ ಜಾಗ ಕೊಟ್ಟೆ ಒಡಲಿನಾಚೆ ಬದುಕುವುದ ಕಲಿಸಿ ಕೊಟ್ಟೆ ನನಗಾಗಿ ಸುಂದರ ಬಾಲ್ಯವನ್ನು ಕಟ್ಟಿಕೊಟ್ಟೆ ಬಣ್ಣದ ರೆಕ್ಕೆಯ ಹಚ್ಚಿ ನನ್ನ ಹಾರಲು ಬಿಟ್ಟೆ ಹಸಿದಾಗ ಮಮತೆಯ ಕೈ ತುತ್ತನಿಟ್ಟೆ ಅತ್ತಾಗ ನನ್ನ ರಮಿಸಿ ಸಿಹಿ ಮುತ್ತನಿಟ್ಟೆ ನನಗಾಗಿಯೇ ನಿನ್ನ ಜೀವನ ಮುಡಿಪಾಗಿಟ್ಟೆ ನೀ..ತ್ಯಾಗ - ಸಹನೆಗಳ ಮೇರು ಶಿಖರ ನೀನಿಲ್ಲದ ಮನೆ-ಮನವೆರಡು ಭಂಜರ ಬಾಲ್ಯದಲಿ ಗುರುವಾದೆ ಯೌವನದಲ್ಲಿ ಸಖಿಯಾದೆ ಜೀವನದುದ್ದಕ್ಕೂ ನನ್ನ ಜೊತೆಯಾದೆ ಕಾಣದ ದೇವರ ನಾನೇನು ಬಲ್ಲೇನು? ಕಣ್ಣಿಗೆ ಕಾಣುವ ದೇವರೆ ನೀನು

----------------------------------

ನೋಂದಣಿ ಐಡಿ : KPFS2-6839

103
Votes
635
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top