Submission 2736

ಹಾರುವ ಹಕ್ಕಿ

ರಚನೆ : ಸುಬ್ಬಲಕ್ಷ್ಮಮ್ಮ ಟಿ ಎಲ್

----------------------------------

ಹಕ್ಕಿಯೊಂದು ವಲಸೆ ಬಂದು ಮರದಿ ಗೂಡು ಹೆಣೆಯಿತು.. ಗೂಡು ಹೆಣೆದು - ಮೊಟ್ಟೆ ಇಟ್ಟು ಭಯದಿ ಕಾವ ನೀಡಿತು.. ಕಾಲ ಉರುಳಿ ಮೊಟ್ಟೆಯೊಡೆದು ಪುಟ್ಟ ಹಕ್ಕಿ ಜನಿಸಿತು.. ತಾನು ಹಸಿದು ಅದಕೆ ಉಣಿಸಿ ತಾಯಿ ಹಕ್ಕಿ ನಲಿಯಿತು.. ರೆಕ್ಕೆ ಬಲಿತ ಪುಟ್ಟ ಹಕ್ಕಿ ಹಾರುವುದನು ಕಲಿಯಿತು.. ಹಾರುತ.. ಹಾರುತ ಒಂದು ದಿನ ತನ್ನ ತಾಯಿಯನ್ನೇ ಮರೆಯಿತು

----------------------------------

ನೋಂದಣಿ ಐಡಿ : KPFS2-6831

5
Votes
222
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top