ಶತಮಾನದ ಶ್ರೇಷ್ಟ ಸಂತ
ರಚನೆ : ಶ್ರೀಮತಿ ಶಿಲ್ಪಾ ನಾಗರಾಜ ಹುನಗುಂದ
----------------------------------
ವಿಜಯಪುರದಿ ನೀನು ಕಲಿಯಲೆಂದು ಬಂದೆ ಅಲ್ಲಿ ಸಿಕ್ಕರು ನಿನಗೆ ಮಲ್ಲಿಕಾರ್ಜುನ ತಂದೆ ಜ್ಞಾನವನು ಹರಿಬಿಟ್ಟು ಮೋಹವನು ಬದಿಗಿಟ್ಟು ಸರಳತೆಯ ಸಾಕಾರ ಮೂರ್ತಿ ನೀನಾದೆ ಪ್ರವಚನದಿ ಎಲ್ಲರಿಗು ಅಮೃತವ ಬಡಿಸುತ್ತ ಬದುಕಿನಾ ಬೆಳಕಿಗೆ ಸ್ಫೂರ್ತಿ ನೀನಾದೆ ಹಿತಮಿತದ ಮಾತಲ್ಲಿ ಉಪದೇಶ ಮಾಡುತ್ತ ಪಕ್ವಾನ ದೂಟವನು ಎಲ್ಲರಿಗು ಉನಿಸಿದೆ ಶುದ್ಧತೆಯು ಬದ್ಧತೆಯು ನುಡಿ ನಡೆಯಲಿರಲೆಂದೆ ಬೆರೆತು ಬಾಳುತ ಮುಂದೆ ಸಾಗು ನೀನಂದೆ ನೋವುಗಳ ತೋಟದಲಿ ನಗೆಯ ಮೊಗ್ಗರಳಿಸುತ ಎಲ್ಲರೊಳಗೊಂದಾಗಿ ಇರು ಎಂದ ಗುಣವಂತ ಅಧ್ಯಾತ್ಮದ ಗಡುಗೆಯಲ್ಲಿ ಸರಳವಾದ ಅಡುಗೆಮಾಡಿ ಭಕ್ತರ ಮನದೆಲೆಯಲ್ಲಿ ಉನಬಡಿಸಿದ ಶ್ರೇಷ್ಟಸಂತ.
----------------------------------
ನೋಂದಣಿ ಐಡಿ : KPFS2-6827