ನನ್ನ ಈ ಚಂದಮಾಮ
ರಚನೆ : ಯಶೋಧ ಚಂದ್ರಶೇಖರ
----------------------------------
ಅವನೆಂದರೆ ಮನದಂಗಳದ ಚಂದ್ರಮ ನಗುವನು ನಕ್ಷತ್ರ ನಾಚುವಂತೆ ! ಅವನೆಸರೆ ಈ ಉಸಿರಿಗೆ ಆಸರೆಯಾಗಿರಲು ಅವನಷ್ಟೆ ಈ ಬದುಕಿಗೆ ಗಮ್ಯವು ! ಅವನೆಂದರೆ ಒಲವು ಅವನಷ್ಟೆ ಚೆಲುವು ಅವನಿರುವ ಕನಸು ಅವನಷ್ಟೆ ಸೊಗಸು ! ಕಂಡಂದೆ ಅವನ ಮರೆತೆನು ಜಗವ ಆ ಮುದ್ದು ನಗುವಿಗೆ ಬದುಕೆ ರಂಗಾಯಿತು ಬಯಸಲು ಏನಿಲ್ಲ ಅವನಿರಲು ಸನಿಹ ! ಈ ಪರಿಯ ಪ್ರೀತಿಗೆ ಕಾದ ವರುಷಗಳೆಷ್ಟೊ ನಿನ್ನೊಲವ ತಂಪಿಗೆ ಮಾದ ಗಾಯಗಳೆಷ್ಟೊ ! ಅವನಿರಲು ಬದುಕು ಬೆಳದಿಂಗಳ ಬೆಳಕು ಪ್ರತಿ ಉಸಿರಿಗೂ ಪ್ರತಿ ಹೆಜ್ಜೆಗೂ ಕಾರಣ ಈ ಪ್ರೀತಿ ಈ ಪೂರ್ಣ ಚಂದ್ರಮನಿಂದ ನಾನಾದೆನು ಪೂರ್ತಿ !
----------------------------------
ನೋಂದಣಿ ಐಡಿ : KPFS2-6823