ಬಾ ನಲ್ಲೆ
ರಚನೆ : ರವಿಕುಮಾರ್ ಎಸ್ ಹುಲ್ಲೂರ್
----------------------------------
ಬಾ ನಲ್ಲೆ ಬಾನಲ್ಲಿ ಹಾರಾಡುವ ಬಾನಾಡಿ ನಾವಾಗಿ ನಲಿದಾಡುವ ಬಾ ನಲ್ಲೆ ಕಡಲಲ್ಲಿ ಈಜಾಡುವ ಭೂತಾಯಿ ಮೀನಾಗಿ ಒಂದಾಗುವ|| ಬಾ ನಲ್ಲೆ ಬನದಲ್ಲಿ ಓಡಾಡುವ ನವಿಲಾಗಿ ಗರಿ ಬಿಚ್ಚಿ ಕುಣಿದಾಡುವ ಬಾ ನಲ್ಲೆ ಕನ್ನಡದ ಪದವಾಗುವ ಕಬ್ಬಿಗರ ಕಾವ್ಯದಲಿ ಹದವಾಗುವ || ಬಾ ನಲ್ಲೆ ಗಿರಿಯಲ್ಲಿ ಝರಿಯಾಗುವ ಇಳಿಜಾರಿ ಜೊತೆ ಸೇರಿ ನದಿಯಾಗುವ ಬಾ ನಲ್ಲೆ ಸೊಂಪಾದ ಸುಮವಾಗುವ ತಂಪಾದ ಗಾಳಿಯಲಿ ಕಂಪಾಗುವ.||
----------------------------------
ನೋಂದಣಿ ಐಡಿ : KPFS2-6812