ತವರೂರ ಹಾದ್ಯಾಗ ನಮ್ಮವ್ನ ಕಂಡಾಗ....
ರಚನೆ : ಪ್ರಶಾಂತ್ ಪಿ ಎನ್
----------------------------------
ತವರೂರ ಮರಿಬ್ಯಾಡ ಮುದ್ದಿನ ತಂಗ್ಯವ್ವ ನಮ್ಮೂರ ತೆಂಗು ನಿನಗಾಗೇ ತೂಗ್ಯಾವ. ಯಾಕವ್ವ ಬರವಲ್ಲಿ ತವರೂರ ಜಾತ್ರೀಗ ನಿನ್ ನೆನೆದು ಮುನಿದಾಳ ನಮ್ಮೂರ ಮಾರ್ಯವ್ವ. ನೀನಿಲ್ದೇ ಒಣಗ್ಯಾವ ನಿಮ್ಮನಿಯ ಹೂದೋಟ ಬಂದಾರ ಬಾ ಒಮ್ಮಿ ಗಂಗವ್ವ ಬಂದಾಂಗ ಆ ಶಿವನ ಜಟೆಯಿಂದ ದುಮ್ಮಿಕ್ಕಿ ಇಳಿದಾಂಗ. ನಿಮ್ಮವ್ವ ತಂದ್ಯಾಳ ಜರತಾರಿ ಸೀರಿ ಊರೆಲ್ಲಾ ಹೇಳ್ಯಾಳ ನೀ ಬರುವ ಖಾತರಿ, ನಿಮ್ಮಪ್ಪ ತಂದ್ಯಾನ ಬಣ್ಣಾದ ಛತ್ತಾರಿ ಕಾದ್ಯನ ಕಣ್ಣರಳಿ ನೀ ಬರವ ದಾರಿ. ಹೆಣ್ಮಕ್ಳು ಇಲ್ಲಾದ ತವರೊಂದು ತವರೇನ? ನೀನೆಂದು ಮರಿಬ್ಯಾಡ ತವರೀನ ಬಾಗೀನ, ಬಂದಾರ ಬಾ ಒಮ್ಮೀ ಬಿಟ್ಯೆಲ್ಲಾ ಬಿಗುಮಾನ.
----------------------------------
ನೋಂದಣಿ ಐಡಿ : KPFS2-6763