ಕರಗಿದ ಕಾಳಜಿ
ರಚನೆ : ದರ್ಶನ್ ಹೆಚ್
----------------------------------
ಕಾರುಣ್ಯದಂತ ಕಾಳಜಿ ನೀಡಿದೆ ಅವಳಿಗೆ ಅಂದು ಆದರೆ ಕಾಳಜಿಯು ಕರಗುವಾಸ್ಟು ಬೇಸರವಾಗಿದೆ ಇಂದು ಕತ್ತಲೆಯ ಕಣ್ಣೀರಿಗೆ ಕರವಸ್ತ್ರವಾಗಿದ್ದೆ ಅಂದು ಆದರೂ ಅವಳಿಗೆ ಕಾಣಲಿಲ್ಲವೇ ನನ್ನ ಕಣ್ಣೀರು ಇಂದು . ನಿಲ್ಲದ ಮಾತುಗಳಾಗಿದ್ದವು ಅಂದು ನಿಲ್ಲಿಸಿದರೆ ಸಾಕು ಎನ್ನುವಂತಾದಳು ಇಂದು. ಮಾತಿನ ಸರಪಳಿಯೇ ಹರಿದಿತ್ತು ಅಂದು ಆದರೆ ಸರಪಳಿ ಹರಿದು ಮಾತಿಲ್ಲದ ಮೌನವಾಗಿದೆ ಇಂದು. ಕೊಂಚ ಕಾಲ ಕೇಳಿದೆ ಮಾತಾಡಿಸಲು ಅಂದು ಆದರೆ ಆ ಮಾತುಗಳೆ ಬಾರದಷ್ಟು ಭಾರವಾಗಿದೆ ಇಂದು. ಕೊನೆಯಿಲ್ಲದ ಕವಿತೆಯಾದೆ ನೀನು ನಿನ್ನ ಬರೆಯುವಲ್ಲಿ ವಿಫಲವಾದೇ ನಾನು.
----------------------------------
ನೋಂದಣಿ ಐಡಿ : KPFS2-6758