Submission 2620

ಹೇಗೆ ತೀರಿಸಲಿ ನಿನ್ನ ಋಣವ

ರಚನೆ : ರೂಪಾ ಡಿ

----------------------------------

ಹೇಗೆ ತೀರಿಸಲಿ ನಿನ್ನ ಋಣವ. ಬಯಸದೆ ಬಂದರೂ, ಹೊಸ ದಾರಿ ತೆರೆದೆ ಈ ಬದುಕಿಗೆ. ಬೇಡದ ಬಂಧಗಳ ಬಿಡಿಸಿ ಜೊತೆಯಾದೆ ನನ್ ಈ ಪಯಣಕೆ. ಪ್ರೀತಿಯೋ, ಆಕರ್ಷಣೆಯೋ ಆದರೂ ಸೋತಿರುವೆ ನಿನ್ನ ಆ ಮನಸಿಗೆ. ತೊಂದರೆಗಳಿಂದಲೇ ಶುರುವಾದ ಈ ಪ್ರೀತಿಗೆ ನಂಬಿಕೆಯೊಂದೇ ಬೆಸುಗೆ. ಕರೆ, ಸಂದೇಶಗಳಿಂದ ದಿನ ಕಳೆದಿಲ್ಲ ನಾವು, ಭೇಟಿ,ಬಯಕೆಗಳು ದೂರದ ಹಿಮಾಲಯದಾಗೇ, ಆದರೂ ಈ ಹೃದಯಗಳ ಸಂಗಮವೇಗೇ!? ಗೆಳೆಯ, ಕಠಿಣ ರೂಪವ ತಿದ್ದಿ ಮೃದು ಮಾಡಿದವ ನೀನು ಸದಾ ನನ್ನ ನಗುವನ್ನು ಬಯಸುವ ಸಾಹುಕಾರ ನೀನು. ಯಾರು ಅರಿಯದ ಈ ಹುಚ್ಚು ಮನಸನ್ನು ಮಗಳಂತೆ ಅಪ್ಪಿದವ ನೀನು. ಸೇರಿದ ಕಾರಣವೇನೋ? ದೂರವಿದ್ದೆ ಕಟ್ಟಿದ ಕನಸುಗಳೇಷ್ಟೋ... ಈಗ, ನಾ ದೂರವಾಗಲು ನಿಂತಿರುವುದೇಕೊ? ಕಾರಣ ನೀ ಬಂದ ಹುಟ್ಟೋ, ಇಲ್ಲ ನಾ ಬಂದ ರೀತಿಯೋ ತಿಳಿದರೂ.. ತಿಳಿಯದು ಗೆಳಯ ಯಾರ ಕಣ್ಣು ತಾಕಿದೆ ಎಂದು. ಈ ಪ್ರೀತಿ ಪಯಣದಲಿ ಸೋತವಳು ನಾನೇ, ಗೆದ್ದವನು ನೀನೇ. ಕ್ಷಮೆ ಇರಲಿ... ಗೆಳಯ ಹೇಗೆ ತೀರಿಸಲಿ ನಿನ್ನ ಋಣವ.

----------------------------------

ನೋಂದಣಿ ಐಡಿ : KPFS2-6756

0
Votes
126
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top