Submission 2574

ನಾಡು ನುಡಿಯ ನಿತ್ಯ ನಾದ

ರಚನೆ : ಪುಷ್ಪಾ ಮಲ್ಲಿಕಾರ್ಜುನ್

----------------------------------

ನಿನ್ನ ನುಡಿಯಲಿ ನೆನೆಯುತಿವೆ ಕನಸು, ಮಣ್ಣಿನ ನೋಟದಿ ಮೂಡಿದೆ ಮನಸು. ಮಳೆಹನಿಯಂತೆ ಬೀಳುವ ಅಕ್ಷರ, ಹೃದಯ ತಟ್ಟುವ ನಾದದ ಅಂತರ. ನದಿ ಹರಿಯುವಂತೆ ಸಾಗುವ ನುಡಿ, ಪ್ರತಿಯೊಬ್ಬರಲ್ಲಿ ಹುಟ್ಟುವ ಕಿಡಿ. ನಗುತ ಬರುವೆ ನಿನ್ನ ಧ್ವನಿಯಾಗಿ, ಕಣ್ಣೀರು ಕರಗುವ ಕಾವ್ಯವಾಗಿ. ನಗರದ ಬೆಳಕು, ಹಳ್ಳಿಯ ಗಾಳಿ, ಎರಡರೊಳಗಿದೆ ನಿನ್ನ ಚಾಳಿ. ಯುಗ ಬದಲಾದರೂ ಮರೆವುದಿಲ್ಲ, ಕನ್ನಡದ ಕಣಸು ನಿಲ್ಲುವುದಿಲ್ಲ. ಹೃದಯದ ಬಡಿತದಲ್ಲಿ ನಿನ್ನ ಹೆಸರಿದೆ, ಕನ್ನಡ ನುಡಿಯೇ ನಿಜವಾದ ಸಿರಿಯಾಗಿದೆ

----------------------------------

ನೋಂದಣಿ ಐಡಿ : KPFS2-6725

1
Votes
93
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top