ವಿಸ್ಮಯ
ರಚನೆ : ಶಿವರಾಜು ಡಿಸಿ
----------------------------------
ಕಂಡರೂ ಕಾಣದ ನೆನ್ನೆಗಳೆಷ್ಟೋ, ಕಾಣದೆ ಬರುವ ನಾಳೆಗಳೆಷ್ಟೋ ಬೆಳಕೇ ಇಲ್ಲದ ಕೋಣೆಗಳೆಷ್ಟೋ , ಬೆಳಕಿಗೆ ಬಾರದ ಕಲೆಗಳೆಷ್ಟೋ ಪ್ರೀತಿ ಮಾಡಿದರೂ ಮೌನ ಮುರಿಯದ ಹುಡುಗಿಯರೆಷ್ಟೋ, ಮದುವೆಯಾದರೂ ಜೊತೆಗೆ ಬಾಳದ ಜೋಡಿಗಳೆಷ್ಟೋ ವಿದ್ಯೆಯೇ ಬಾಳಿನ ಬೆಳಕೆಂದು ತಿಳಿದವರೆಷ್ಟೋ ಅದಿಲ್ಲದೆ ಸಾಧಿಸಿರುವ ಸಾಧಕರೆಷ್ಟೋ ತಂದೆ-ತಾಯಿಗಳಿಲ್ಲದೆ ಕೊರಗುವ ಜೀವಗಳೆಷ್ಟೋ ಇದ್ದರೂ ಸಂತೈಸದ - ಸಲಹದ ಮಕ್ಕಳೆಷ್ಟೋ ಪಾಠವೇ ಮಾಡದ ಗುರುಗಳೆಷ್ಟೋ , ಮಾಡಿದರೂ ಅರ್ಥವೇ ಆಗದ ಪಾಠಗಳೆಷ್ಟೋ ಇದೇ ಜೀವನದ ವಿಸ್ಮಯ
----------------------------------
ನೋಂದಣಿ ಐಡಿ : KPFS2-6719