Submission 2556

ದೇವದಾನವ

ರಚನೆ : ಪೂರ್ಣಚಂದ್ರ

----------------------------------

ಆದಿಯಿಂದ ಆಗರ್ಭಶ್ರೀ ಸಿರಿವಂತ ಈ ಮಾನವ, ಏಸು ಕಾಯಂಗಳ ಕಳೆದು ಎಂಬತ್ತನಾಲ್ಕು ಲಕ್ಷ ಜೀವ ರಾಶಿಗಳ ದಾಟಿ, ಪಡೆದ ಮಾನವ ಈ ಜೀವನವ, ಹುಟ್ಟಿದ ಕೆಲವರುಷ ಮಣ್ಮುದ್ದೆ, ಆಸೆ, ಆಮಿಷ, ಕೋಪ, ದರ್ಪ ಎಂಬಿತ್ಯಾದಿ ತಿರುವುಗಳ ಕಲಿತಲೆ, ಈತನಿಗೆ ಮುಂತೋರಿಕೆಗೆ ಏಕ ಮುಖ, ಹಿಂದೆ ಕಾಣಿಸದ ದಶ ಮುಖ, ಮನದಾಸೆ ಹತ್ತರಷ್ಟು,ದುರಾಸೆ ಅದರ ಹತ್ತುಪಟ್ಟು, ಅಂತರ್ಯುದ್ಧ, ಹೋರಾಟ ಪರಿಮಿತಿಯಿಲ್ಲದಷ್ಟು, ಕೋಪಕ್ಕೂ ದರ್ಪಕ್ಕೂ, ದುಃಖಕ್ಕೂ ಖಿನ್ನತೆಗೂ ವ್ಯತ್ಯಾಸ ತಿಳಿಯ ತನ್ನ ಸ್ಥೈರ್ಯ ಧೈರ್ಯ ಸಾಮರ್ಥ್ಯ ವಿಶ್ವಾಸವೂ ಇವನರಿಯ, ಉತ್ಸಾಹ ಗುಂದಿದರೆ ಪುಟಿದೆಳುವ ಸವಾಲು, ಚೈತನ್ಯ ಚಿಮ್ಮಿದರೆ ಹಾಕುವ ಅಗಸಕ್ಕೆ ಏಣಿಯ ಸಾಲು, ವರುಷಗಳು ಹರಿದಂತೆ ಹರಿತಗೊಳ್ಳುವುದು ಇವನನುಭವ, ಮಾನವನಿವ, ಸುರಾಸುರರ ಮನದೊಡಗೂಡಿದ ದೇವದಾನವ

----------------------------------

ನೋಂದಣಿ ಐಡಿ : KPFS2-6710

68
Votes
316
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top