Submission 2540

ನುಡಿದುದು ಧ್ವಾರಕಾಪುರದೊಡೆಯಂ | ಪಿರಿಯಕ್ಕರ ಛಂದಸ್ಸು

ರಚನೆ : ನೀ. ಸುನೀತಾನಂದ (ಪೃಥ್ವಿ)

----------------------------------

ಪೊಸಗಾರ ಮಸಕವಿದು ಬೆಳ್ಸೋನೆ ಸುರಿಯುತಿರಲು ಬೆಟ್ಟದ ತುದಿ ಕುಳಿತೀದಂ ದುಸ್ತಮದಲಿದ್ದ ಪಾಂಡವ ಮಧ್ಯಮನಿನಿತು ಪೇಳ್ದುದುಮಾವ ತಾಣಮದುಂ ಜಗದಿ ಶ್ರೇಷ್ಠ ತಾಣಂ, ಸ್ವರ್ಣ ಮಣಿಮಕುಟ ಭುವನ ಭವನಂಗಳಾಗಲಿಯಂ ಹೆಗ್ಗದ್ಯ ಕವನ ತಾಳೆಯೋಲೆವಿಪ ಗ್ರಂಥಾಲಯ ಮಾಳಿಗೆಯಂಗಳೋ ತಾ ಕಾಂಚನವಿಪ ಭಂಡಾರಂಗಳೋ ಪೆತ್ತದಾಯ ಕಕ್ಷಿಯ ಮಂಡಲಂಗಳೋ ನೀ ಕಚಿತದಿ ನಿಜವ ಪೇಳುಪೇಳೇಂದುದು ಶೌರಿಯಂಗೆ ಕುಳಿತು ಪಕ್ಕದೊಳು ಅಲ್ತಾಲ್ತುರರಸನೇ ಜಿಯ್ಯನೇ ಗಾಡ ಮಬ್ಬುಗವಿದ ತಾಣಂ ಕಗ್ಗತ್ತಲೋಳ್ ಮಿೞ್ತು ಬಿಗಿಗಬ್ಬಿವಿಪ ಬಾಗಿಲಾತಾಣಂ ಕರ್ವ ತೊಯ್ದಾರಿಯುವತತಾಣಂ ಕಲ್ಲಾಸಿಗೆಯಿರ್ದ ತಾಣಮಾ ನನ್ನ ಜನುಮ ತಾಣಂ ಶ್ರೇಷ್ಠ ತಾಣಂಮೆಂದನಂ ತಲೆಯೊಳಗೆ ಚಿಂತೆ ಕವಿದ ಹನುಮ ಧಜನ ಶಿರಸ್ಕಂದವಲಾಲೈಸಿ ನುಡಿಸನು ಭೋಗ ಭಾಗ್ಯವದೊರೆದು ಕಠಿಣ ಕಾಲದೋಳೊಂಟಿತನದಾರಿಯುವುದದೆಯೋ ಬಿಗುಪು ಮನದ ದಿಗಂತರಾಳ ಸೆರೆಮನೆ ಬಿಗುಹುತನಿಸೈನಾರ್ಜುನನೇದಿಳಿ ಈಗೆ ಸೆರೆಮನೆಯ ಎದೆಮನೆಗೆ ಗವಿತನವ ಕವಿತನಕ್ಕೆ ಸಂದಿರ್ಸಿಸಿ ಬಿಗಿ ಮನವ ತಿಳಿಗೊಳಿಸುವಂತಾಯಿತ ನುಡಿದನು ದ್ವಾರಕಾಪುರದೊಡೆಯಂ

----------------------------------

ನೋಂದಣಿ ಐಡಿ : KPFS2-6697

8
Votes
157
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top