ನನ್ನ ಹಾಳೆ ನನ್ನ ಲೇಖನಿ ನನ್ನ ಸಾಲುಗಳು
ರಚನೆ : ಮಲ್ಲಿಕಾರ್ಜುನ ಬಿ
----------------------------------
ನಾ ಬರೆದ ಸಾಲುಗಳವು ನನ್ನೊಮ್ಮೆ ಕೇಳಿದವು "ಯಾರಿಗೂ ಬೇಡದಿಹ ನನ್ನನ್ನ ನೀನೇಕೆ ಗೀಚಹೋದೆ" ಪದಗಳಲಿ ಹುದುಗಿಟ್ಟ ಭಾವಗಳವು ಕೇಳಿದವು "ಸಾಸಿವೆಯಷ್ಟು ಕಿಮ್ಮತ್ತಿಲ್ಲದ ನನ್ನೇಕೆ ಸಾಗರವಾಗಿಸಿದೆ" ಗೀಚಿ-ಗೀಚಿಸಿಕೊಂಡ ಹಾಳೆ-ಲೇಖನಿಗಳು ಕೇಳಿದವು "ಎತ್ತಲೂ ಸಲ್ಲದೇ ಇತ್ತಿತ್ತಲೇ ಉಳಿಯಲೇಕೆ ನಮ್ಮನ್ನ ಛೇದಿಸಿದೆ" ಉತ್ತರಿಪೆ ನಾನವಕೆ "ಭಾವವಂ ಶರಧಿಯಾಗಿಸೆ ಗೀಚುವಾ ಗೀಳಿನೊಳ್ ಛೇದಿಸುತಲಾರಾಧಿಸಿಹೆನ್ ಹಾಳೆ-ಲೇಖನಿಯ" ನಾನೇ ಇರಲು ನನ್ನ ಹೊರತಾದ ಆಕಾಂಕ್ಷೆ ಎಲ್ಲಿಯದು ನಿಮಗೆ?
----------------------------------
ನೋಂದಣಿ ಐಡಿ : KPFS2-6681