ಆರಾಧನೆ
ರಚನೆ : ಬಿಂದು ಹೆಚ್ ಎಂ
----------------------------------
ನನ್ನಾಸೆ ಬಯಕೆಗಳನ್ನೆಲ್ಲಾ ಎದೆಯಲ್ಲಿ ಕಲ್ಲಾಗಲು ಬಿಡುವೆ, ಆ ಕಲ್ಲಿನಿಂದಲೇ ನಿನ್ನದೊಂದು ಸುಂದರವಾದ ಶಿಲ್ಪವ ಕಡೆದು ಮನದ ಗರ್ಭಗುಡಿಯಲ್ಲಿ ಪ್ರತಿಷ್ಟಾಪಿಸಿ ಆರಾಧಿಸುವೆ. ಭಾವನೆಗಳ ಆಭರಣ ತೊಡಿಸಿ, ನೆನಪುಗಳ ಹೂರಾಶಿ ಅರ್ಪಿಸಿ ಪ್ರೀತಿಯ ನಿತ್ಯ ಪೂಜೆಯ ಧ್ಯಾನದಲ್ಲಿ ಮುಳುಗಲು ಹೃದಯಬಡಿತವೇ ಗಂಟೆಯಾರತಿ. ಕಣ್ಣುಗಳ ದೀರ್ಘ ತಪಸ್ಸಿಗೆ ನಿನ್ನ ನಸುನಗುವಿನ ಸದ್ದೆ ಸಾಕೇನೋ ಭಂಗವಾಗಲು.
----------------------------------
ನೋಂದಣಿ ಐಡಿ : KPFS2-6677