Submission 2504

ಸೃಷ್ಟಿಕರ್ತೆಯ ಪುಟ್ಟ ಕಥೆ

ರಚನೆ : ಶಿವ ಹಿರೇಮಠ

----------------------------------

ನಿಬಂಧನೆಯ ನೆಲೆಯಲ್ಲಿ ಬೆಳೆಸಿದರು ನನ್ನ ಯಾವತ್ತೂ ನಾನು ನಾನಾಗಿ ಬೆಳಿಯಲೆ ಇಲ್ಲ! ಸೀಮಿತದ ಮಾತುಗಳ ಕಲಿಸಿದರು ಎನಗೆ ಧ್ವನಿ ಮಾತ್ರ ನನ್ನದಾಗಿತ್ತು, ಮಾತುಗಳಲ್ಲ! ಕನಸುಗಳ ಕಟ್ಟಲು ಜಾಗವ ಕೊಟ್ಟರು ನನಸಿನ ಮನೆ ಕಟ್ಟಲು ಬಿಡಲೇ ಇಲ್ಲ! ಸಮಾಜದ ಮುಂದೆ ತಲೆಬಾಗಿ ನಡೆ ಎಂದರು ಸಮಾಜ ನನಗೆಷ್ಟು ತಲೆಬಾಗುವುದೆಂದು ಯಾರು ಕೇಳಲೇ ಇಲ್ಲ! ಜಗತ್ ಸೃಷ್ಟಿಕರ್ತೆ ಎಂದರು ನನ್ನ ಅತ್ಯಾಚಾರದ ಹೆಸರಲ್ಲಿ ಎಷ್ಟೋ ಜನ ಕೊಂದರು ಎನ್ನ! ನೀಡಿ ಬಿಡಿ ನನಗೆ ಸಮಾನತೆಯ ಬದುಕು, ನಿರ್ಭಯದ ಬದುಕು. ಅದೇ ನನ್ನ ಜನ್ಮಸಿದ್ಧ ಹಕ್ಕು.

----------------------------------

ನೋಂದಣಿ ಐಡಿ : KPFS2-6672

1
Votes
113
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top