ನೆಮ್ಮದಿಯ ಹುಡುಕಾಟದಲಿ
ರಚನೆ : ರಾಘವೇಂದ್ರ ಜಿ ಎನ್
----------------------------------
ಮನೆಗೋ ಮಸಣಕೋ ಮೆರವಣಿಗೆ ತಿಳಿಯದಲೇ ಹೊರಟ ಪಯಣಕೆ ಒಮ್ಮೊಮ್ಮೆ ತೊಡರು ನೀಡುವ ಮನಕೆ ಬಯಸಿದೆ ನೆಮ್ಮದಿಯ ಹರಕೆ ಹರಸಿಯೂ ಸಿಗದ ಶಾಂತಿಯೆಂಬ ಹೊದಿಕೆ ನನ್ನೊಳಗೆ ಗಾಸಿಯಾದ ಹೃದಯಕೆ ಪಯಣದಲಿ ಯಾರೆಂದು ತಿಳಿಯದೆ ಸಿಕ್ಕಳಾಕೆ ನೀಡುತ್ತಾ ನೆಮ್ಮದಿಯ ಜೀವಕೆ ಹರಸುತಾ ನನ್ನೊಡನೆ ಪಯಣಕೆ ಜೊತೆಯಾಗಿ ನೆಡೆದಳಾಕೆ
----------------------------------
ನೋಂದಣಿ ಐಡಿ : KPFS2-6666