ಗೂಡಂಗಡಿ
ರಚನೆ : ಮಹಾಂತೇಶ ಇಲಕಲ್ಲ
----------------------------------
ನನ್ನ ಗೂಡಂಗಡಿ ನನ್ನೆಲ್ಲಾ ಕನಸ ಬುತ್ತಿಗಂಟು ಕಟ್ಟಿಟ್ಟ ನನ್ನಂಗಡಿ, ಬದುಕಿಗೆ ಭರವಸೆಯ ಬೆಳಕಾಗಿರುವ ನನ್ನದೊಂದು ಪುಟ್ಟ ಅಂಗಡಿ, ಒಂಟಿಗಾಲಲಿ ನಾ ನಿಂತಿರುವಾಗ ಊರುಗೋಲಾಗಿ ಜೊತೆಯಾಗಿ ಸಾಗಿದ ನನ್ನ ಅಂಗಡಿ, ಬದುಕ ಕಟ್ಟಿಕೊಟ್ಟು ಬಾಳು ಬಂಗಾರವಾಗಲು ಮುಂದಾದ ನನ್ನಂಗಡಿ ಅಭಿವೃದ್ಧಿಯೆಂಬ ವಿನಾಶದ ಹೆಸರಿಗೆಬಲಿಯಾದ ನನ್ನಂಗಡಿ, ಕನಸ ಬುತ್ತಿಗಂಟ ಚಲ್ಲಿತೇ ಮೊಟ್ಟೆಯೊಳಗಿನ ಮರಿಯ ಮರಣವಾಯಿತೇ, ಟಾರು ಗೀರು ಆಕಬೇಕಂತೆ ನನ್ನ ಪುಟ್ಟಂಗಡಿಯ ಮೇಲೆ, ಲಾರಿ ಬಸ್ಸುಗಳಿಗೆ ನಿಲ್ಲಬೇಕೆಂಬ ಬಯಕೆಯಂತೆ ನನ್ನದೇಯಮೇಲೆ,ನನ್ನಂಗಡಿ ಮೇಲೆ ಹಲವರ ಆಸೆಗೆ ಕುರಿಮರಿಯಾಯಿತೆ, ಕಾಣದ ಕೈಗಳ ಹರಕೆಯಾಯಿತೆ. ಒಟ್ಟಿನಲ್ಲಿ ನನ್ನ ಗೂಡಂಗಡಿ ಬಲಿಯಾಯಿತೆ.
----------------------------------
ನೋಂದಣಿ ಐಡಿ : KPFS2-6571