ಕನ್ನಡದ ಪ್ರೇಮ
ರಚನೆ : ಸೋಮೇಶ್ ಜಿ ಎ
----------------------------------
ಕನ್ನಡವು ನೀಡಿತು ನಮಗೆ ಜನುಮವನ್ನು, ಕನ್ನಡದ ಮೇಲೆ ಇಡಬೇಕು ನಿತ್ಯವು ಅಭಿಮಾನವನ್ನು. ನಿತ್ಯವು ಬಳಸಿ ಕನ್ನಡವನ್ನು, ತೋರಬೇಕು ಕನ್ನಡವ್ವನ ಮೇಲಿರುವ ಪ್ರೇಮವನ್ನು. ನಾವು ಸ್ಮರಿಸಬೇಕು ನಮ್ಮ ಪೂರ್ವಜರ ಶ್ರಮದ ಅನವರಣಗಳನ್ನು. ನೋಡಬೇಕು ನಿತ್ಯವು ಕನ್ನಡದ ಫಲಕಗಳನ್ನು, ನೆನೆಯಬೇಕು ಒಳ್ಳೆಯ ನುಡಿಗಳನ್ನು, ಜೀವನವು ಎತ್ತಿಕೊಂಡು ಓಡುತ್ತಿದೆ ಅಭಿಪ್ರಾಯಗಳನ್ನು, ಮಾರೆಯಬೇಕು ಕಹಿ ಘಟನೆಗಳನ್ನು. ದಿನವೂ ಹರಸುತ್ತಿದ್ದಾಳೆ ಕನ್ನಡಂಬೆಯು ತನ್ನ ಮಕ್ಕಳ ಭವಿಷ್ಯವನ್ನು.
----------------------------------
ನೋಂದಣಿ ಐಡಿ : KPFS2-6554