ಅಂತರ್ಮುಖಿ ಅವಳು
ರಚನೆ : ಸುಪ್ರಿತಾ ಡಿ ಮುದೂರ್
----------------------------------
ನಾ ಇಟ್ಟಿದ್ದೆ ಎದೆತುಂಬಾ ಕನಸುಗಳ ನಕ್ಷತ್ರ, ಪ್ರೀತಿಯ ಗೆರೆಎಳೆದು ಬಿಡಿಸಿದ್ದೆನು ನಿನಚಿತ್ರ ಎಲ್ಲರಂತಲ್ಲ ಆಕೆ ಸಲ್ಲು ಸಲ್ಲಿಗೆ ನಗದಾಕೆ, ತುಸು ಹಲ್ಕಿರಿದು ನಗೋದನ್ನ ಕಲಸಿದಾಕೆ ಮೂಡಣದಿ ಮೂಡುವ ಸೂರ್ಯನ ಕಾಂತಿಯೇ ನಾಚುತಿರೆ, ಹುಣ್ಣಿಮೆಯ ಚಂದ್ರನ ಕಣ್ಣುಗಳೇ ಅವಳಂಧವ ಹೊಗಳುತಿರೆ ನಾ ಅವಳಂಧವ ಮೋಹಿಸಿಲ್ಲ, ಅವಳ ಆಡಂಬರದ ಮಾತಿಗೆ ಸೊತಿಲ್ಲ ಮನದಲಿ ಮೂಡಿದ ಮೊದಲ ತುಂತುರು ನಾ ಕನಸಲೇ ಸೇರಿದೆ ಪ್ರೀತಿಯಊರು ನಾ ಕೇವಲ ಅವಳ ಅಂತರಾತ್ಮದ ಆರಾಧಕ, ಅವಳ ಕಂಡಾಗ ನಾನಾದೆ ಮೂಕ ಪ್ರೇಕ್ಷಕ
----------------------------------
ನೋಂದಣಿ ಐಡಿ : KPFS2-6542