Submission 2292

ಭರವಸೆಯೇ ಜೀವನ

ರಚನೆ : ಧನುಷ ಕೆ

----------------------------------

ಜೀವನವೆಂದರೆ ಭರವಸೆಯ ಒಂದು ಹಸಿರು ಚಿಗುರು, ಇಂದಿನ ನೋವಿಗಿಂತ ನಾಳೆಯ ನಗುವೇ ಹಿಗುರು. ಕತ್ತಲೆ ಕರಗುವುದು, ಬೆಳಕು ಮೂಡುವುದು ಖಚಿತ, ಮುಂಜಾವಿನ ಹೊಂಗಿರಣವೇ ನಮ್ಮ ಬದುಕಿನ ಪಥ. ​ಬಂದು ಹೋಗುವ ಜನರೆಲ್ಲಾ ಪಯಣದ ಗುರುಗಳು, ನೀಡುವರು ಪಾಠ, ತೆರೆಯುವರು ಹೊಸ ಬಾಗಿಲುಗಳು. ಕೆಲವರು ನೆರಳಾಗಿ, ಕೆಲವರು ಬಿಸಿಲಿನ ಜ್ವಾಲೆಯಾಗಿ, ರೂಪಿಸುವರು ನಮ್ಮನು ನಿತ್ಯವೂ ಹೊಸದಾಗಿ. ​ನಗುವಿನ ದೀಪ ಹಚ್ಚಿ ಸಾಗುವುದೇ ಜೀವನ, ಅದರಲ್ಲೇ ಅಡಗಿದೆ ಸುಖದ ಸಿಹಿ ಸ್ಪಂದನ. ಒಂದು ಘಟನೆಯೇ ಪೂರ್ಣ ಜೀವನದ ಚಿತ್ರವಲ್ಲ, ಅದು ಕೇವಲ ಒಂದು ಅಲೆ, ಇಡೀ ಸಾಗರವಲ್ಲ. ​ಆ ನೋವಿನ ತೀರದಲ್ಲೇ ನಿಂತು ಕಾಲ ಕಳೆಯದಿರು, ಭರವಸೆಯ ದೋಣಿ ಏರಿ, ಮುಂದಕೆ ಸಾಗುತಿರು.

----------------------------------

ನೋಂದಣಿ ಐಡಿ : KPFS2-6522

12
Votes
148
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top