Submission 2204

ನನ್ನ ಕವಿತೆ ನೀನು

ರಚನೆ : ಯಾಕೀನ್ ಖ್ವಾಜಾ ಐ ದೊಡ್ಡಮನಿ

----------------------------------

ಹಾಡಿ ಹೊಗಳುವ ಕವಿ ನಾನು. ನನ್ನ ಮನಸಿಗೆ ಬಲಗಾಲನ್ನು ಇಟ್ಟು ಪ್ರವೇಶಿಸಿದ ಕವಿತೆ ನೀನು. ತುಸು ಕಾಡಿಗೆ ಕದೀಯಲೆ ನಿನ್ನ ನಯನದಿಂದ? ಕದ್ದು ನಿನ್ನ ಹೆಸರಿನ ನನ್ನ ಎದೆಯಮೇಲೆ ಹಚ್ಚೆ ಹಾಕಿಸುವೆ. ಕೈಚಾಚಿ ಬೇಡುವೆನು ಕೊಡುವೆ ನನಗೇ ಪ್ರೇಮದ ಭಿಕ್ಷೆಯ? ಕೊನೆ ಉಸಿರು ಇರೋವರೆಗೂ ನಿನ್ನ ನೆರಳಂತೆ ನಿನ್ನ ಜೊತೆಗೆ ಸಾಗುವೆ. ನಿನ್ನಕಂಡ ಕ್ಷಣದಿಂದ ನನಗೆ ಇಡೀ ಲೋಕವೇ ಮರೆತಹಾಗಿದೆ. ನಿನ್ನ ಸಿಹಿ ಮಾತಿಗೆ ನನ್ನ ಮನಸು ಸೋತಿದೆ. ಏನೆಂದು ಹೇಳಲೇ ನನ್ನ ಮನಸಿನ ತಳಮಳ. ಕೆಸರು ತುಂಬಿದ ಹೃದಯದಲ್ಲಿ ಅರಳಿದೆ ನಿನ್ನ ಹೆಸರಿನ ಕಮಲ

----------------------------------

ನೋಂದಣಿ ಐಡಿ : KPFS2-6446

9
Votes
147
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top