Submission 2174

ಕನ್ನಡಿಗನೇ ಕೇಳು

ರಚನೆ : ಗುರುರಾಜ ಕುಲಕರ್ಣಿ

----------------------------------

ಕರುನಾಡ ಕುಡಿಯೇ ಕೇಳು ನಿನ್ನಲ್ಲೊಂದು ಕೋರಿಕೆ ತಾಯ್ನುಡಿಯ ತೊರೆಯಬೇಡ ಏನು ನಿನ್ನ ಅಂಜಿಕೆ? ವಲಸೆ ಬಂದ ಆಸೆಗಳಿಗೆ ನಲಿದು ನೆಲೆಯ ನೀಡಿದೆ ಕಲಿತೆ ಪರರ ಮಾತುಗಳನು ಅರಿತು ತಂದೆ ಗೂಡಿಗೆ ಚಿನ್ನದಂಥ ಭಾಷೆ ನಿನದು ಸೂರಿನಲ್ಲೇ ಸವೆದಿದೆ ತನ್ನತನವ ತೊರೆದು ನೀನು ಬಾಳಲೆಲ್ಲಿ ಓಡಿದೆ?

----------------------------------

ನೋಂದಣಿ ಐಡಿ : KPFS2-6422

69
Votes
447
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top