Submission 2148

ಭಾವ ವರಸೆ

ರಚನೆ : ರವಿಕಾಂತ ಎಸ್

----------------------------------

ಸೋತು ಸರಿದ ಭಾವವು ನಿವ್ವಳವಾಗಲು, ಅರಿತ ಆಹ್ವಾನದ ಭಾವವು ಏರಿತೇನು ? ಉದ್ವೇಗದೊಳ್ ಉದುಗಿದ ಚೀರಾಟವು ಚಂಚಲವಾಗಲು, ಚದುರಿತು ಚಕಾರವೆತ್ತಿದ ಚಿತ್ತ ಸೈನ್ಯವು, ಭಾಗಿಸುವೆಯೇನು ನೀನು ? ಭಾವದಾಡಂಬರಿಕೆಯಾ ? ಬಳಲಿದ ಬಸುರಿನ ಭಾವೈಕ್ಯತೆಯೊಳು ! ಸಂಹಿತೆ ಸಲಹಲು ಕರೆದಿರಲ್ಲವೇ ? ಅನಕ್ಷರಸ್ಥ ನಾನ್ ಅಂತಾಕ್ಷರಿಯೊಳು ಅನಂತವಾಗಿ, ಒಡಂಬಡಿಕೆಯ ಓಕಳಿ ರಂಗೇರಲು ತಣ್ಣಗಾಗುವೆ, ತೆಕ್ಕೆಯಲ್ ತೋರಲು ತಾರೆಗಳು ದೂರವಾಗಿವೆಯೇನು ? ತಾಟಕಿಯ ತಂತಿಯ ಮೀಟು ಮೌನವೇ ನೆಮ್ಮದಿಗಾಗಿ, ಹಿಂದಿರುವೆ ಬೆಂಬಲದಿ, ಚೀರುತ್ತಾ ನಿನಗಾಗಿ, ಇಷ್ಟೆಲ್ಲಾ ಒಪ್ಪಂದಗಳ ನಡುವೆಯೂ ಅಗಲಿದರೆ, ದುಃಖಿಸಬೇಡ, ದುಡುಕಬೇಡ, ನಕ್ಕಿ ನಲಿದುಬಿಡು, ಅವತಾರವಿರತವಾಗಿಯಾದರೂ ಬೆಂಬಲಿಸುವೆ ಬಾಲಿಕೆಯೇ, ನಿನ್ನ ಆತ್ಮಾವಲೋಕನದಾತ್ಮರಾಗವ, ಆಡಂಬರದಿಂದ, ಅನಾವರತ ಭಾವದಿಂದ, ಇಂತಿ ನಿನ್ನ ಭರವಸಾತೀತ ಭಕ್ಷ್ಯದರಸ !

----------------------------------

ನೋಂದಣಿ ಐಡಿ : KPFS2-6405

8
Votes
147
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top