Submission 2114

ಪ್ರೇಮದ ಆಪ್ಯತೆ

ರಚನೆ : ಅಮೃತವರ್ಷಿಣಿ

----------------------------------

ಅತಿಯೇನಿಸುವಷ್ಟು ಪ್ರೀತಿ, ನಿನ್ನೊಲವಿನ ಈ ರೀತಿ! ಪ್ರೇಮದಲ್ಲಿಲ್ಲ ವ್ಯಾಮೋಹ, ದೇಗುಲವಾದಂತೆ ದೇಹ! ಖಾಲಿಯಾಗದ ಸಿಹಿಮುತ್ತು, ಅಮಲಲ್ಲೂ ಏರಿದ ಮತ್ತು! ನಿನ್ನ ನುಡಿಗಳ ಸೊಗಸು, ಜೇನದ್ದಿ ತೆಗೆದ ಹಲಸು! ಕೆನ್ನೆಯಂಚಿನ ಮಂದಹಾಸ, ಕವಿತೆಗೆ ಸಿಕ್ಕಂತೆ ಪ್ರಾಸ! ಕಾಣದ ಕಂಗಳ ಮತ್ತದೆ ನಿರಾಶೆ ನಿನ್ನ ನೆನಪೇ ಇರುಳ ನಿಶೆ!

----------------------------------

ನೋಂದಣಿ ಐಡಿ : KPFS2-6383

1
Votes
115
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top