ಕನ್ನಡಕ್ಯಾರ ಹಂಗು?
ರಚನೆ : ಪ್ರತೀಶ್ ಶೆಟ್ಟಿ
----------------------------------
ಮೂಡಣದಿ ರವಿಯೆದ್ದ ಕೆಂಪಳದಿ ರಂಗು ಬಾನಗಲದಂಚಿನಲೂ ಕರುನಾಡ ಗುಂಗು ಕೇಳಿಹುದು ಎದೆಬಡಿತ ಮಿಡಿಯುತಿಹ ಸದ್ದು ಕನ್ನಡದ ಡಿಂಡಿಮಕೆ ಬೇಕ್ಯಾರ ಹಂಗು? ಕನ್ನಡದ ಕಂಪನಕೆ ಯಾಕ್ಯಾರ ಹಂಗು? ಕಡಲಾಚೆ ಗಿರಿಯಾಚೆ ಬೀಸೋಗಾಳಿಯೇ ಅಂಚೆ ತೇಲಿತೋರಲಿ ತನುವು ಮಾತೃಭಾಷೆಯ ಒಲವು ಹಸಿರ ಕಾನನದಲ್ಲಿ, ಹಳೆಯ ಕಾವ್ಯಗಳಲ್ಲಿ ಮುಗಿಲಾಚೆ ಪಸರಿಸಲಿ ಕನ್ನಡದ ಬಲವು ಶತಮಾನಗಳ ಕಂಪು, ಅಳಿಸಿಹೋಗದ ಹೊಳಪು ಅಂಟಿರುವ ಕನ್ನಡಕೆ ಬೇಕ್ಯಾರ ಹಂಗು? ಶತಕೋಟಿ ಮನಗಳಲಿ ದಶಕೋಟಿ ಮನೆಗಳಲಿ ತುಂಬಿರುವ ಕನ್ನಡಕೆ ಯಾಕ್ಯಾರ ಹಂಗು?
----------------------------------
ನೋಂದಣಿ ಐಡಿ : KPFS2-6379