Submission 2086

ಧನ್ಯವಾಯಿತು ತಾಯಿ

ರಚನೆ : ಮಂಜುನಾಥ ಎಲ್

----------------------------------

ಹೊನ್ನ ಕಳಸದಲಿ ಬಿತ್ತಿದ ಚಿನ್ನದ ನಾಡಲ್ಲಿ ಜನಿಸಿದ ಎನಗೆ ಮುತ್ತಿನ ಸಿರಿಹೊನ್ನ ಸುರಿದು ಜಲದ ಜೈಕಾರದಲಿ ಸ್ಥಳವಾಕರಿಸಿದ ಎಮಗೆ ಧನ್ಯವಾಯಿತು ತಾಯಿ ಈ ನಿನ್ನ ಮಡಿಲಲ್ಲಿ ಆಸರೆ ನೀಡಿದಕ್ಕೆ. ಪಂಪ, ರನ್ನ, ಜನ್ನರು ಕವಿ ಕಳಿದಾಸರು ನೆಲಸಿದ ಬೀಡು, ದಾನ ಶೂರರು ಮೆಟ್ಟಿ ನಿಂತವರ ನಾಡು, ಬುದ್ಧ ಬಸವ ಅಂಬಿಗರು ಜೀವಿಸಿದ ನಾಡು, ರಸ್ತೆ ಬದಿಯಲ್ಲಿ ರತ್ನಾರ್ಣಿಯನು ಅಳೆದು ತೂಗಿದ ನಾಡು ಈ ಸಿರಿಗನ್ನಡ ನಾಡಲ್ಲಿ, ಜನಿಸಿದ ಎಮಗೆ ಧನ್ಯವಾಯಿತು ತಾಯಿ ಈ ನಿನ್ನ ಮಡಿಲಲ್ಲಿ ಆಸರೆ ನೀಡಿದಕ್ಕೆ.

----------------------------------

ನೋಂದಣಿ ಐಡಿ : KPFS2-6373

1
Votes
125
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top