ಕುರಿ-ಕೋಳಿ ಕುಣದಾವೋ
ರಚನೆ : ಯಲ್ಲಪ್ಪ ಸಾಲಿ ಚಿಂತಕುಂಟಾ
----------------------------------
ಕೆಸರಿಲ್ಲೋ ತಮ್ಮ ಶುದ್ಧ ಕೆನಿ ಮೊಸರ ನನ್ನ ಕನ್ನಡ ನಾಡಿದು ಬಿಳಿ ಹಾಲಿನ ತವರ ತಾಸುಗಳು ಕಳೆದರೂ ತ್ರಾಸಿಲ್ಲದ ಮಾತು ಬಿಸಿಯಾಗದ ತಂಪಿದು ಕನ್ನಡವೇ ಮುತ್ತು ತೆನಿ ತೂಗೋ ಜ್ವಾಳ ತಲಿ ಎತ್ತಿ ಹಾಡ್ಯವ ಅಳುಗ್ಯಾಡೋ ಕವಳಿ ಸಟ್ನ ನಿಂತಾವ ಹಗರಿಲ್ಲೋ ತಮ್ಮ ನನ್ನ ಕನ್ನಡ ನುಡಿ ಕುರಿ ಕೋಳಿ ಕುಣಿದಾವೋ ಕನ್ನಡಾನಾ ಹಾಡಿ ಗಿಳಿ ಪಂಚಾಂಗ ಹೇಳೋದೂ ಕನ್ನಡದೊಳಗ ಸೂರ್ಯ ಹೆಚ್ಚು ಬೆಳಗೋದು ಕನ್ನಡದ ಮ್ಯಾಗ ವಿಶ್ವದ ಕಿವಿಯೊಳಗ ಐತಿ ನನ್ನ ನಾಡ ಕೂಗ ಭ್ಹಾಳ ಪ್ರೀತಿ ಕೊಟ್ಟಾರ ನುಡಿಗಿ ಜಗದ ಜಗಲಿ ಮ್ಯಾಗ! ಎತ್ತಿನ ಬಂಡಿ ಯಿಂದ್ಹಿಡಿದು ಮ್ಯಾಲಿನ ಗಾಡಿ ದೊಡ್ಡಿ ದಾರಿಹಿಂದಿಡಿದು ಸಿಸಿ ರೋಡಿನ ಕಡಿ ಗುಡಿಸಲಿನಿಂದ್ಹಿಡಿದು ಎತ್ತರದ ಬಂಗಲೆಯ ಕಡಿ ನೋಡ ಎಷ್ಟು ದೂರ ಹೋಗೈತಿ ನನ್ನ ಕನ್ನಡ ನುಡಿ!
----------------------------------
ನೋಂದಣಿ ಐಡಿ : KPFS2-6372