ಸಿಂಧೂರ
ರಚನೆ : ಆನಂದ ಯಲ್ಲಪ್ಪ ಕೊಂಡಗುರಿ ಹಿರೇಬಾಗೇವಾಡಿ
----------------------------------
ಭಾರತೀಯರ ಮೇಲೆ ಪಾಪಿರಕ್ಕಸರ ಅಟ್ಟಹಾಸ! ಪ್ರಕೃತಿಯ ಮಡಿಲಲ್ಲಿ ವಿಕೃತಿಯ ಮೆರೆದಿರಿ! ಹರಿಸಿದಿರಿ ಕಣಿವೆಯಲ್ಲಿ ನೆತ್ತರವ! ನಮ್ಮ ನಾಗರಿಕರನ್ನು ಕೊಂದು ನರ ಭಕ್ಷಕರಾದಿರಲ್ಲ! ವಿಶ್ವವೇ ಕಾದು ಕುಳಿತ್ತಿತ್ತು,ನಮ್ಮ ಪ್ರತ್ಯುತ್ತರಕ್ಕೆಂದು! ಪಡೆಗಳ ಜಂಟಿ ಉತ್ತರಕ್ಕೆ ತತ್ತರಿಸಿದವು ಉಗ್ರರ ಅಡಗು ತಾಣಗಳಂದು! ಲೋಹದ ಹಕ್ಕಿಗಳ ಹಾರಾಟ ಶತ್ರುಗಳ ನರಳಾಟ! ತ್ರಿದಳದಿ ಯುದ್ಧ ನೈಪುಣ್ಯರು ನಾವು. ಯುದ್ಧ ಒಳಗೂ ಹೊರಗೂ! ನವ ವಧುವಿನ ಸಿಂಧೂರ ಅಳಿಸಿದಿರಿ ಅಂದು! ನಿಲ್ಲದಿರಲಿ ಸಿಂಧೂರ ದಂಡಯಾತ್ರೆ ಎಂದಿಗೂ! ಉಗ್ರರನು ನಿಗ್ರಹಿಸಿದ ಹೆಮ್ಮೆಯ ಸೈನಿಕರು!
----------------------------------
ನೋಂದಣಿ ಐಡಿ : KPFS2-6357