Submission 2006

ನನ್ನಪ್ಪ - ದೇವರು

ರಚನೆ : ತೇಜಸ್ ಎನ್ ರಾಜ್

----------------------------------

ಕೇಳು ನನ್ನಪ್ಪ..., ಎಂದೆಂದಿಗೂ ನಿನಗೆ ನೀನೇ ಸಾಟಿ, ಇಗೋ ನನ್ನ ಪ್ರಣಾಮಗಳು ನಿನಗೆ ಕೋಟಿ ಕೋಟಿ. ನಮ್ಮ ಮೇಲೆ ನಿನಗೆ ಯಾಕಿಷ್ಟು ಪ್ರೀತಿ, ಮಮತೆ, ಕರುಣೆ, ನೆತ್ತಿ ಸುಟ್ಟರೂ, ಹಸಿವಾದರೂ, ದೇಹ ದಣಿದು ಸುಸ್ತಾದರೂ, ಮರೆಯಲಿಲ್ಲ ನಮ್ಮ ಕೈ ಹಿಡಿದು ನಡೆಸುವ ನಿಮ್ಮ ಹೊಣೆ. ಹರಿದ ಚಪ್ಪಲಿ, ಹರಿದ ಬಟ್ಟೆಯ ಸಮೇತ ಕೂತು, ಅನ್ನಕ್ಕೆ ನೀರು ಬೆರಸಿ ತಿಂದು, ತೃಪ್ತಿ ಆಯ್ತು ಅಂತ ನಮ್ಮೊಟ್ಟಿಗೆ ಹೇಳುವೆ, ನಮಗೆ ಮಾತ್ರ ಕೈ ತುಂಬ ಹಣ ಕೊಟ್ಟು, ದೇಹಕ್ಕೆ ಹಿತವಾಗುವ ವಸ್ತ್ರ, ನಾಲಿಗೆಗೆ ರುಚಿ ಸಿಗುವ ಊಟ ಕೊಡಿಸಿ , ನೀನು ದೇವರಾಗುವೆ. ತೀರಿಸಲಾಗದು ಅಪ್ಪ ಈ ನಿನ್ನ ಋಣವನ್ನು ಏಳೇಳು ಜನ್ಮಕ್ಕೂ, ಯಾವ ಜನ್ಮದ ಪುಣ್ಯವೋ, ಅದೆಷ್ಟು ಜನ್ಮದ ಅನುಬಂಧವೋ, ಸಾವಿರ ನೋವುಗಳ ನಡುವೆಯೂ ನಮಗಾಗಿ ನೀ ನಗುವೆ. ನಿಮ್ಮ ಘನತೆ, ಗೌರವಕ್ಕಿಂತ ನನಗೆ ಹೆಚ್ಚೇನಿದೆ, ನಾ ಮಣ್ಣಾದರೂ, ನಿಮ್ಮ ಹೆಸರು ಅಜರಾಮರವಿರುವಂತೆ, ನಾ ಬದುಕಿ ತೋರಿಸುವೆ.

----------------------------------

ನೋಂದಣಿ ಐಡಿ : KPFS2-6323

139
Votes
931
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top