ತಾಯ್ನುಡಿ
ರಚನೆ : Shridhara BG
----------------------------------
ಅಳಬೇಡಿ ಕನ್ನಡದ ಅಂಕಲಿಪಿಗಳೇ ಕೂಂಕು ನುಡಿವ ಈ ಜನರ ಮಾತುಗಳಿಗೆ ಸೊರಗಬೇಡಿ ಕನ್ನಡದ ಅಂಕಲಿಪಿಗಳೇ ನಿಮ್ಮನ್ನು ಧಿಕ್ಕರಿಸುವ ಈ ಕಪಿಗಳಿಗೆ. ನಿಮ್ಮತನವ ಇಲ್ಲಿತನಕ ಉಳಿಸಿಕೊಂಡಿರಿ ಮೂಕರಿಗೆ ಭಾಷೆ ಕೊಟ್ಟು ಬೆಳೆಸಿಕೊಂಡಿರಿ ಕವಿಗಳಿಗೆ ಕಾವ್ಯ ಕೊಟ್ಟು ಹೆಸರು ಕೊಟ್ಟಿರಿ ಕನ್ನಡಕ್ಕೆ ರೂಪಕೊಟ್ಟು ಕೀರ್ತಿ ತಂದಿರಿ. ತಾಳಿ-ತಾಳಿ ಸ್ವಲ್ಪ ತಾಳಿ ದುಡುಕಬೇಡಿ ನಿಮಗೆ ಯಾರು ಇಲ್ಲವೆಂದು ಕೊರಗಬೇಡಿ. ಕನ್ನಡದ ಕಡೇ ಶಾಲೆ ಇರುವವರೆಗೂ, ನಿಮಗೆಂದು ಸಾವಿಲ್ಲ ಕೊನೆವರೆಗೂ. ಜಯಭೇರಿಗೆ ಎಲ್ಲೆಲ್ಲೂ ಸಿದ್ದವಾಗಿ ಕನ್ನಡಕ್ಕೆ ಎಲ್ಲರೂ ಬದ್ಧರಾಗಿ.
----------------------------------
ನೋಂದಣಿ ಐಡಿ : KPFS2-6321