ಹುಡುಕಾಟ
ರಚನೆ : ಬಸವರಾಜ ಜಿ
----------------------------------
ಹೊಸದೇನೋ ಹುಡುಕಬೇಕಿದೆ ಕಳೆದೋದ ಕ್ಷಣಗಳ ಅವಲೋಕಿಸುತ, ಹೊಸ ಚಹರೆಯ ಕಂಡುಕೊಳ್ಳಬೇಕಿದೆ ಹಳೆ ನೋವುಗಳ ಮರೆಯುತ...||೧|| ಒಮ್ಮೊಮ್ಮೆ ಸಂತಸದ ತಂಗಾಳಿ ಕೆಲವೊಮ್ಮೆ ಸಂಕಟದ ಬಿಸಿಗಾಳಿ, ನೆಮ್ಮದಿಯ ಚಣ ಸವಿಯಲು ಹೊಸ ತಾಣವ ಹುಡುಕಬೇಕಿದೆ...||೨|| ಸ್ನೇಹ - ಪ್ರೀತಿಯ ಸವಿಲಾಲಿಯೋ ದುಃಖ - ದುಮ್ಮಾನಗಳ ಜೋಕಾಲಿಯೋ? ಸ್ಥಿರ ಮನಸಿನ ದಡ ಸೇರಲು ಹೊಸ ದಾರಿಯ ಹುಡುಕಬೇಕಿದೆ...||೩|| ದೂರ ತೀರದ ಕನಸ್ಸಿನ ಚುಕ್ಕಿ ಹಿಡಿಯ ಹೊರಟಿಹೆನು ರಾಕೆಟ್ ಹತ್ತಿ, ವಿಮಾನ ಹಿಡಿದರೆ ಎಟಕುವುದೇ? ಹೊಸ ಮಾರ್ಗವ ಹುಡುಕಬೇಕಿದೆ...||೪||
----------------------------------
ನೋಂದಣಿ ಐಡಿ : KPFS2-6319